ಐಗೂರು, ಮೇ ೬: ತಾ. ೧೧ ರಂದು ಹೊಸತೋಟದ ಬ್ಯಾಕ್ ವಾಟರ್ ಮೈದಾನದಲ್ಲಿ ಹೊಸತೋಟ ಪ್ರೀಮಿಯರ್ ಲೀಗ್ ಸೀಸನ್-೯ ಹೆಚ್ಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಪ್ರಥಮ ಬಹುಮಾನ ರೂ. ೧೦,೦೦೦ ನಗದು, ದ್ವಿತೀಯ ಬಹುಮಾನ ರೂ. ೭,೦೦೦ ನಗದು ನೀಡಲಾಗುವುದು. ವೈಯಕ್ತಿಕ ಟ್ರೋಫಿ, ಉತ್ತಮ ಬ್ಯಾಟ್ಸ್ಮೆನ್, ಉತ್ತಮ ಬೌಲರ್, ಉತ್ತಮ ಫೀಲ್ಡರ್ ಮತ್ತು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ನೀಡಲಾಗುವುದು.