ಮಡಿಕೇರಿ, ಮೇ. ೬: ಮೇ ೨೯ ಮತ್ತು ೩೦ ರಂದು ಸುಂಟಿಕೊಪ್ಪದಲ್ಲಿ ನಡೆಯಲಿರುವ ಹದಿನೇಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವ ಕಲಾವಿದರು ಹಾಗೂ ಕಲಾತಂಡಗಳು ಅಧ್ಯಕ್ಷರು/ ಸಂಚಾಲಕರು, ಸಾಂಸ್ಕೃತಿಕ ಸಮಿತಿ, ಹದಿನೇಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸುಂಟಿಕೊಪ್ಪ ಇವರನ್ನು ಸಂಪರ್ಕಿಸಲು ಕೋರಿದೆ.
ಭಾಗವಹಿಸುವ ಕಲಾವಿದರು ಹಾಗೂ ವಿವಿಧ ಪ್ರಕಾರದ ಕಲಾತಂಡಗಳು ಕನ್ನಡನಾಡು, ನುಡಿ, ನೆಲ-ಜಲ, ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಬಿಂಬಿಸುವAತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕಾಗಿ ಕೋರಿದೆ.
ಆಸಕ್ತರು ದೂರವಾಣಿ ಸಂಖ್ಯೆ ಅಜ್ಜಿಕುಟ್ಟಿರ ಸಿ.ಗಿರೀಶ್, ಅಧ್ಯಕ್ಷರು ೯೪೪೯೪೭೫೯೬೫, ಈಶ ಎಸ್.ಎಚ್, ಸಂಚಾಲಕರು ೯೪೮೧೦೬೩೦೨೭ ಸಂಪರ್ಕಿಸಬಹುದು.
ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಅಜ್ಜಿಕುಟ್ಟಿರ ಸಿ.ಗಿರೀಶ್, ಅಧ್ಯಕ್ಷರು, ಸಾಂಸ್ಕೃತಿಕ ಸಮಿತಿ, ‘ಗಿರಿದರ್ಶಿನಿ’, ಅಪ್ಪಾರಂಡ ಬಡಾವಣೆ, ಸುಂಟಿಕೊಪ್ಪ-೫೭೧೨೩೭, ಇ-ಮೇಲ್ ವಿಳಾಸ ಚಿಛಿgiಡಿisho೯@gmಚಿiಟ.ಛಿom
ಅರ್ಜಿ ಸಲ್ಲಿಸಲು ಮೇ, ೧೦ ಕೊನೆಯ ದಿನವಾಗಿದೆ ಎಂದು ಎ.ಸಿ.ಗಿರೀಶ್ ಅವರು ತಿಳಿಸಿದ್ದಾರೆ.