ಸುಂಟಿಕೊಪ್ಪ, ಮೇ ೬: ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ ತಾ.೭ ರಿಂದ ೧೦ ರವರೆಗೆ ನಡೆಯಲಿದೆ ಎಂದು ದೇವಾಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ.
ತಾ. ೭ ರಂದು ಸಂಜೆ ೫.೩೦ ಕ್ಕೆ ಧ್ವಜಾರೋಹಣ ಹಾಗೂ ಆಡಂಬರ ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರೆ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ ನೆರವೇರಿಸಲಿದ್ದಾರೆ. ತಾ. ೮ ರಂದು ಸಂಜೆ ೫.೩೦ ಗಂಟೆಗೆ ಬಲಿಪೂಜೆಯನ್ನು ಧರ್ಮಗುರು ಟಿ.ಪೌಲೂಸ್ ಹಾಗೂ ವಿಜಯಕುಮಾರ್ ಅವರುಗಳು ನೆರವೇರಿಸಲಿದ್ದಾರೆ. ತಾ. ೯ ರಂದು ಮಕ್ಕಳಿಗೆ ಪರಮ ಪ್ರಸಾದ ಸಂಸ್ಕಾರ ಮತ್ತು ಆಡಂಬರ ದಿವ್ಯ ಬಲಿಪೂಜೆಯನ್ನು ಚಾರ್ಲ್ಸ್ ಪೆರಿಯನಾಗಮ್ ನೇರವೇರಿಸಲಿದ್ದಾರೆ. ತಾ. ೧೦ ರಂದು ಸಂಜೆ ೫.೩೦ಕ್ಕೆ ಸಂತ ಅಂತೋಣಿ ಹಬ್ಬದ ಅಂಗವಾಗಿ ಆಡಂಬರ ಗಾಯನ ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷರಾದ ಡಾ. ಎಸ್‌ಜೆ ಫ್ರಾನ್ಸಿಸ್ ಸೆರಾವೋ ನೆರವೇರಿಸಲಿದ್ದಾರೆ. ತೇರಿನ ಮೆರವಣಿಗೆಯ ನಂತರ ಪರಮ ಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧಿಕಾರಿ ಡಾ. ಎಸ್‌ಜೆ ಫ್ರಾನ್ಸಿಸ್ ಸೆರಾವೋ ಅವರು ನೇರವೇರಿಸಲಿದ್ದಾರೆ ಎಂದು ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ.