ಚೆಯ್ಯಂಡಾಣೆ, ಮೇ ೬: ಮೂರ್ನಾಡು ಸಮೀಪದ ನಾಲ್ಕೇರಿ ಗ್ರಾಮದ ಬೇತ್ರಿಯ ಮುಹಿಯ್ಯದ್ದೀನ್ ಜುಮಾ ಮಸೀದಿ ಹಾಗೂ ಅರಬಿಕ್ ಮದರಸ ಸಮಿತಿಯ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಜರುಗಿತು.

ಬೇತ್ರಿ ಮುಹಿಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಪಿ.ಇ. ಮುಸ್ತಫಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬೇತ್ರಿ ಖತೀಬ್ ಮೊಹಮ್ಮದ್ ಸಖಾಫಿ ಉದ್ಘಾಟಿಸಿ ಮಾತನಾಡಿದರು.

ವಾಗ್ಮಿ ಮೊಹಮ್ಮದ್ ರಾಫಿ ಹಿಮಮಿ ಕಾಮಿಲ್ ಸಖಾಫಿ ಅಯ್ಯಂಗೇರಿ ಧಾರ್ಮಿಕ ಪ್ರಭಾಷಣ ನಡೆಸಿ ಸ್ವಲಾತ್‌ನ ಮಹತ್ವ ಕುರಿತು ಮಾತನಾಡಿದರು. ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ ದಲ್ ಮುತ್ತನ್ನೂರ್ ತಂಙಳ್ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನೆಗೆ ನೇತೃತ್ವ ವಹಿಸಿದರು. ಮೊಹಮ್ಮದ್ ಸಖಾಫಿ ಹಾಗೂ ಸಂಗಡಿಗರಿAದ ಬುರ್ದಾ ಮಜ್ಲೀಸ್ ನೆರವೇರಿತು.

ಈ ಸಂದರ್ಭ ಅಬೂಬಕ್ಕರ್ ಹಾಜಿ ಹಾಕತ್ತೂರ್, ಜಮಾಅತ್ ಉಪಾಧ್ಯಕ್ಷ ಶಮೀರ್, ಕಾರ್ಯದರ್ಶಿ ಜುನೈದ್ ಪಿ.ಇ., ಕೋಶಾಧಿಕಾರಿ ಸಲೀಂ, ಮಾಜಿ ಅಧ್ಯಕ್ಷ ಅಬೂಬಕ್ಕರ್, ಎಸ್‌ಎಸ್‌ಎಫ್ ರಾಜ್ಯ ಸಮಿತಿಯ ಸದಸ್ಯ ಮಿರ್ಷಾದ್ ಅನ್ವಾರಿ, ಅಜ್ಮಲ್ ಅನ್ವಾರಿ, ಕಡಂಗ ಮೊಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ, ಹಾರಿಸ್ ಬಯಾನಿ, ಸುಹೈಲ್ ಸುಲ್ತಾನಿ, ಮೊಹಮ್ಮದ್ ಮುಸ್ಲಿಯಾರ್, ಹನೀಫ್ ಮಿಸ್ಬಾಹಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.