ಐಗೂರು, ಮೇ. ೫: ಐಗೂರಿನ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ಮೂರ್ತಿ ಅಮ್ಮನವರ ದೈವಸ್ಥಾನದ ನೇಮೋತ್ಸವ ಹಾಗೂ ೫೦ನೇ ವರ್ಷದ ಸುವರ್ಣ ಮಹೋತ್ಸವವು ಹಲವು ವೈವಿಧ್ಯಮಯ ಕೋಲಗಣಗಳಿಂದ ಐದು ದಿನಗಳ ಕಾಲ ನಡೆಯಿತು.
ದೇವಾಲಯವನ್ನು ವಿದ್ಯುತ್ ದೀಪಗಳ ಅಲಂಕಾರಗಳೊAದಿಗೆ ಶೃಂಗಾರಗೊಳಿಸಲಾಗಿತ್ತು. ಸುಳ್ಯದ ವಾದ್ಯಗೋಷ್ಠಿ ಮತ್ತು ಐಗೂರಿನ ಚಂಡೆ ಮೇಳಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ದೈವದರ್ಶಿಗಳು ಹಾಗೂ ಪ್ರಧಾನ ಅರ್ಚಕರಾದ ಆನಂದ ಪೂಜಾರಿ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಶುದ್ಧಿಪುಣ್ಯಃ, ಕಳಸದ ಮೆರವಣಿಗೆ, ಮಹಾಪೂಜೆ, ಹಣ್ಣುಕಾಯಿ ನೈವೇದ್ಯ, ಗುರುದಿ ಪೂಜೆಗಳು ನಡೆದವು.
ದೈವ ನರ್ತಕರಾದ ಸುಳ್ಯದ ಬೊಳಿಯ ಮಜಲಿನ ಜಯರಾಮ ತಂಡದವರಿAದ ಒಟ್ಟು ೧೪ ಕೋಲಗಣಗಳು ಉತ್ಸವದಲ್ಲಿ ಪಾಲ್ಗೊಂಡವು. ಕೋಲ ಗಣಗಳಾದ ಅಣ್ಣಪ್ಪ ಸ್ವಾಮಿ ದರ್ಶನ, ಆದಿಶಕ್ತಿ ಮಹಾತಾಯಿ ದರ್ಶನ, ಭದ್ರಕಾಳಿ ದೇವಿಯ ದರ್ಶನ, ಭಂಡಾರದ ಆಗಮನದ ಪೂಜೆ, ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ, ಮಂತ್ರವಾದಿ ಗುಳಿಗನ ಕೋಲ, ಕುಪ್ಪೆ ಪಂಜುರ್ಲಿ ಕೋಲ, ಮಂತ್ರ ದೇವತೆ ಕೋಲ, ಧೂಮಾವತಿ ದೈವದ ಕೋಲ, ಧರ್ಮ ದೈವದ ಕೋಲ, ಕೊರಗಜ್ಜ ದೈವದ ಕೋಲ, ಭಂಡಾರ ನಿರ್ಗಮನದ ಪೂಜೆ, ಭದ್ರಕಾಳಿ ದೇವಿಯ ಕೋಲ, ಗುಳಿಗನಕೋಲ ಮತ್ತು ಕೊರತಿ ದೈವದ ಕೋಲದ ನಂತರ ನಡೆದ ಗುರುದಿ ಪೂಜೆಯು ಭಕ್ತರ ಮನ ತಣಿಸಿತು.
ಪೂಜಾ ಕಾರ್ಯಕ್ರಮದಲ್ಲಿ ಭಕ್ತರಿಗೆ ವಸ್ತçದಾನ, ವಿದ್ಯಾರ್ಥಿಗಳಿಗೆ ವಿದ್ಯಾದಾನದ ಲೇಖನಿ ಸಾಮಗ್ರಿ ವಿತರಣೆ, ಲಘು ಉಪಹಾರ, ಅನ್ನ ಸಂತರ್ಪಣೆ ನಡೆಯಿತು.
ಪೂಜೋತ್ಸವದ ಕೊನೆಯ ದಿನ ಸಂಜೆ ಸರ್ವ ದೈವಗಳ ಎಡೆ ಪ್ರಸಾದ ವಿನಿಯೋಗ ಮತ್ತು ಮಹಾ ಮಂಗಳಾರತಿ ನಡೆದು ದೈವ ನಡೆ ಮುಚ್ಚುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಉತ್ಸವಕ್ಕೆ ದೇವಾಲಯದ ಆಡಳಿತ ಮಂಡಳಿಯೊAದಿಗೆ ಗ್ರಾಮಸ್ಥರು ಕೈಜೋಡಿಸಿದರು.