ಮಡಿಕೇರಿ, ಮೇ.೫: ನಿಧಿ ಆಪ್ಕೆ ನಿಕಟ್ ೨.೦ರ ಅಡಿಯಲ್ಲಿ ಭವಿಷ್ಯ ನಿಧಿ ಮೈಸೂರು ಕ್ಷೇತ್ರೀಯ ಕಚೇರಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವನ್ನು ಸೋಮವಾರಪೇಟೆಯ ಆಯತಾನ ಹಾಸ್ಪಿಟಾಲಿಟೀಸ್ ಪ್ರೆöÊವೇಟ್ ಲಿಮಿಟೆಡ್‌ನಲ್ಲಿ ಏ.೨೭ ರಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆಯತಾನದ ಮಾನವ ಸಂಪನ್ಮೂಲ ವ್ಯವಸ್ಥಾಪಕ ಶ್ರೀಕಾಂತ್ ಎಂ.ಪಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇಪಿಎಫ್‌ಒ ಕಡೆಯಿಂದ ಕೆ.ಪಿ ಪ್ರಕಾಶ್, ಸ್ವಸ್ತಿಕ್, ತೇಜಸ್ ಕೃಷ್ಣನ್ ಎ, ಹಾಗೂ ಇಎಸ್‌ಐಸಿ ಕಡೆಯಿಂದ ಚೇತನ್ ಜಿ ಹಾಜರಿದ್ದ ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳನ್ನು ನಿವಾರಿಸಿದರು.
ಸ್ಥಳದಲ್ಲಿ ಹಾಜರಿದ್ದ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಉದ್ಯೋಗ ಸೃಷ್ಟಿಸಲು ಮತ್ತು ಬೆಂಬಲಿಸಲು ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯ ಬಗ್ಗೆ ವಿಚಾರ ಸಂಕಿರಣ ನಡೆಸಲಾಯಿತು.
ಇದೇ ತಿಂಗಳು ಸೇವಾ ನಿವೃತ್ತಿಗೊಂಡ ಕೆಲವು ಪಿಂಚಣಿದಾರರಿಗೆ, PPಔ ಪ್ರತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಭಾಗವಾಗಿ, ಅನೇಕ ಪಿಂಚಣಿದಾರರಿಗೆ ಸ್ಥಳದಲ್ಲಿಯೇ ಡಿಜಿಟಲ್ ಜೀವನ ಪ್ರಮಾಣಪತ್ರದ ನವೀಕರಣ ಮಾಡಲಾಯಿತು.