ಚೆಯ್ಯಂಡಾಣೆ, ಮೇ ೫: ನಾಪೋಕ್ಲು ವೀರಾಜಪೇಟೆಯ ಮುಖ್ಯ ರಸ್ತೆಯ ಬಾವಲಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಪಿಕಅಪ್ ವಾಹನದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ನಡೆದಿದೆ. ಪಾರಾಣೆ ಗ್ರಾಮದ ಶೇಖರ ಎಂಬವರ ಪಿಕ್‌ಅಪ್ ವಾಹನವನ್ನು ಬಾವಲಿ ಗ್ರಾಮದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸಂದರ್ಭ ಮಳೆ, ಗಾಳಿಗೆ ತೋಟದಿಂದ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಪಿಕ್ ಅಪ್ ವಾಹನ ಜಖಂಗೊAಡಿದೆ. ವಾಹನದಲ್ಲಿ ಯಾರು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.