ಮಡಿಕೇರಿ, ಮೇ.೫: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನತೆ ಒಪ್ಪಿದ್ದು ಇದಕ್ಕೆ ಪೂರಕವಾಗಿ ಎರಡೂ ಕ್ಷೇತ್ರಗಳಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ ರಮೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ನಗರಸಭಾ ಸದಸ್ಯರುಗಳಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ ಜಗದೀಶ್, ಯಾಕುಬ್, ದಿನೇಶ್ ಶೆಟ್ಟಿ, ಲೀಲಾ ಶೇಷಮ್ಮ, ಕವನ್ ಕೊತ್ತೋಳಿ, ಕಾನೆಹಿತ್ಲು ಮೊಣ್ಣಪ್ಪ ಖಲೀಲ್ ಭಾಷ, ವಿ.ಜಿ ಮೋಹನ್, ಅರ್ಜುನ್ ಟಿ.ಆರ್, ಮುನೀರ್ ಮಾಚರ್, ಶ್ರೀಮತಿ ಶಶಿ, ಶರಣ್, ಕೆ.ಮೀನಾಜ್ ಪ್ರವೀಣ್, ಕೋಚನ ಚೇತನ, ಮಮಾಜ್ ಬೇಗಂ, ಪ್ರೇಮಾ ಲಿಂಗಪ್ಪರಾಜು, ಕೌಸರ್, ರವಿ ಪಾಪು, ಹಬೀಬ್, ಸಂಪತ್, ಅನ್ಸಾಲ್ ಸೇರಿದಂತೆ ಇತರ ಪ್ರಮುಖರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.