ನಾಪೋಕ್ಲು, ಮೇ.೫: ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಉತ್ಸವ ತಾ.೬ ರಿಂದ(ಇAದಿನಿAದ) ತಾ.೧೦ ರವರೆಗೆ ನಡೆಯಲಿದೆ.

ತಂತ್ರಿಗಳಾದ ದಿವಾಕರ ಭಟ್ಟ ನೇತೃತ್ವದಲ್ಲಿ ಮೇ ತಾ.೬ ರಂದು ಸಂಜೆ ೫:೨೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ತಾ.೭ ರಂದು ೧೦೧ ತೆಂಗಿನಕಾಯಿ ಗಣಪತಿ ಹೋಮ, ಅಷ್ಟ ದಿಕ್ಪಾಲಕ ಹೋಮ, ಚಂಡಿಕಾ ಹೋಮ ನಡೆಯಲಿದೆ. ತಾ.೮ ರಂದು ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ದೇವಿಯ ಪ್ರತಿಷ್ಠೆ, ಬ್ರಹ್ಮ ಕಳಸ ಅಭಿಷೇಕ ಮಹಾಪೂಜೆ ನಡೆಯಲಿದೆ. ತಾ.೯ ರಂದು ಶನಿವಾರ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ ಹಾಗೂ ಮಹಾಪೂಜೆ (ರಾತ್ರಿ ಅನ್ನಧಾನ ಇರುತ್ತದೆ, ತಾ.೧೦ ರ ಭಾನುವಾರ ದೇವಿಯ ಶುದ್ಧ ಕಳಶ ನಡೆಯಲಿದೆ.