ಮಡಿಕೇರಿ, ಮೇ ೩: ನವದೆಹಲಿಯ ಭಾರತದ ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗ (ಓಊಖಅ) ೨೦೧೫ ರಿಂದ ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. ೨೦೨೬ರಲ್ಲಿ ಸ್ಪರ್ಧೆಯ ೧೨ ನೇ ಆವೃತ್ತಿಗೆ, ದೇಶದ ನಾಗರಿಕರಿಂದ ಆನ್‌ಲೈನ್‌ನಲ್ಲಿ ಪ್ರವೇಶಗಳನ್ನು ಆಹ್ವಾನಿಸಿದೆ.

ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಕ್ಕೆ ಬಹುಮಾನದ ಮೊತ್ತವು ಕ್ರಮವಾಗಿ ರೂ. ೨ ಲಕ್ಷ, ರೂ. ೧ ಲಕ್ಷ ೫೦ ಸಾವಿರ ಮತ್ತು ರೂ. ೧ ಲಕ್ಷ ಆಗಿರುತ್ತದೆ. ಆಯೋಗವು ಮೂರು ನಗದು ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳ ಜೊತೆಗೆ, ತೀರ್ಪುಗಾರರು ಶಿಫಾರಸ್ಸು ಮಾಡಿದ ಗರಿಷ್ಠ ನಾಲ್ಕು ಚಿತ್ರಗಳಿಗೆ ತಲಾ ರೂ.೫೦ ಸಾವಿರ ನಗದು ಬಹುಮಾನದೊಂದಿಗೆ ‘ಪ್ರಮಾಣಪತ್ರ’ವನ್ನು ನೀಡಲಾಗುವುದು. ಕಿರುಚಿತ್ರಗಳು ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿರಹುದು, ಇಂಗ್ಲಿಷ್‌ನಲ್ಲಿ ಉಪ ಶೀರ್ಷಿಕೆ ಹಾಕಿರಬೇಕು, ಕಿರುಚಿತ್ರದ ಅವಧಿ ಕನಿಷ್ಟ ನಿಮಿಷಗಳು ಮತ್ತು ಗರಿಷ್ಠ ೧೦ ನಿಮಿಷಗಳು. ಪ್ರವೇಶಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ೩೦ ಜೂನ್ ೨೦೨೬. ಉoogಟe ಡ್ರೈವ್ ಬಳಸಿ ಟಿhಡಿಛಿshoಡಿಣಜಿiಟm@gmಚಿiಟ.ಛಿom ಗೆ ಆನ್‌ಲೈನ್‌ನಲ್ಲಿ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ನಮೂನೆಯ ಪ್ರತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವೆಬ್‌ಸೈಟ್: hಣಣಠಿs://ಟಿhಡಿಛಿ.ಟಿiಛಿ.iಟಿ ಅಥವಾ ಲಿಂಕ್: hಣಣಠಿs://ಟಿhಡಿಛಿ.ಟಿiಛಿ.iಟಿ/ಜಿಟiಠಿbooಞ/ಜಿiಟes/೨೫೫ ನಿಂದ ಡೌನ್‌ಲೋಡ್ ಮಾಡಬಹುದು. ಮಾನವ ಹಕ್ಕುಗಳ ಸಂಸ್ಕೃತಿ ಮತ್ತು ಸಂವೇದನೆಯನ್ನು ಮೂಡಿಸುವ ಉದ್ದೇಶದ ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಯಾವುದೇ ವಯೋಮಿತಿಯ ನಿರ್ಭಂಧವಿಲ್ಲದೇ ಭಾಗವಹಿಸಬಹುದಾಗಿದೆ, ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ. ೦೧೧-೨೪೬೬೩೨೮೧/೨೪೬೬೩೩೬೭ ಸಂಪರ್ಕಿಸಬಹುದು ಎಂದು ಎನ್‌ಎಚ್‌ಆರ್‌ಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಜೈಮಿನಿ ಕುಮಾರ್ ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.