ವೀರಾಜಪೇಟೆ, ಮೇ ೩: ವೀರಾಜಪೇಟೆಯ ತೆಲುಗರ ಬೀದಿಯಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವವು ತಾ. ೫ ರಿಂದ ೯ ರವರೆಗೆ ನಡೆಯಲಿದೆ.

ತಾ. ೫ ರ ಸಂಜೆ ೬.೩೦ ರಿಂದ ೧೦.೩೦ ರವರೆಗೆ ಕರಗ ಆರಾಧನೆ, ತಾ. ೬ ರಂದು ಸಂಜೆ ೮ ರಿಂದ ರಾತ್ರಿ ೧೦ ಗಂಟೆಯವರೆಗೆ ನಂದಾ ದೀಪಾರತಿ, ತದನಂತರ ಪ್ರಸಾದ ವಿನಿಯೋಗ, ತಾ. ೭ ರಂದು ಮಧ್ಯಾಹ್ನ ೧೨ ಗಂಟೆಗೆ ದೇವಿಯ ಮಹಾ ಪೂಜೆ ಹಾಗೂ ಪ್ರಸಾದ ವಿನಿಯೋಗ, ತಾ. ೮ ರಂದು ಮಧ್ಯಾಹ್ನ ೧ ಗಂಟೆಗೆ ದೇವಿಯ ವಿಶೇಷ ಅಲಂಕಾರ ಪೂಜೆ ಮತ್ತು ಮಹಾಪೂಜೆ ಸಂಜೆ ೭ ಗಂಟೆಗೆ ಮಹಾ ಪೂಜೆ ತದನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ತಾ. ೯ ರಂದು ಸಂಜೆ ೭ ಗಂಟೆಯಿAದ ೧೧ ಗಂಟೆಯವರೆಗೆ ಕರಗ ವಿಸರ್ಜನಾರಾಧನೆ ಹಾಗೂ ದೇವಿಯ ಮಹಾ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷÀ ಟಿ.ಪಿ ಕೃಷ್ಣ ತಿಳಿಸಿದ್ದಾರೆ.