ಮಡಿಕೇರಿ, ಏ. ೩೦ : ಕೊಡವ ಭಾಷಿಕ ಜನಾಂಗದಲ್ಲೊAದಾದ ಕೊಡವ ಮಡಿವಾಳ ಸಮಾಜದ ಮಹಾಸಭೆ ಮೂರ್ನಾಡು ಸಮುದಾಯ ಭವನದಲ್ಲಿ ನಡೆಯಿತು.
ಜನಾಂಗದ ೨೨ ಕುಟುಂಬಗಳು ಭಾಗವಹಿಸಿದ್ದವು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಅವರು, ಕೊಡವ ಭಾಷೆಯನ್ನು ಮಾತನಾಡುವ ೨೧ ಜನಾಂಗದಲ್ಲಿ ಮಡಿವಾಳ ಜನಾಂಗದವರು ತನ್ನದೇ ಆದ ನೆಲೆಗಟ್ಟಿನಲ್ಲಿ ಬದುಕನ್ನು ಸಾಗಿಸಿಕೊಂಡು ಬರುತ್ತಿರುವ ಹಿಂದುಳಿದ ಜನಾಂಗವಾಗಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಸಮಾಜದಲ್ಲಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವ ಮಡಿವಾಳ ಜನಾಂಗ ಕೊಡವ ಸಂಸ್ಕೃತಿ - ಸಂಪ್ರದಾಯಗಳು, ಪದ್ಧತಿ - ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬದುಕನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸರಕಾರ ಇಂತಹ ತೀರಾ ಹಿಂದುಳಿದ ಜನಾಂಗವನ್ನು ಗುರುತಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಯತ್ನಿಸುವಂತಾಗಬೇಕು ಎಂದರು.
ಜಾತಿಯ ಬಗ್ಗೆ ಕೀಳರಿಮೆ ಸಲ್ಲದು
ಯಾವುದೇ ಜಾತಿಯನ್ನು ಕೀಳರಿಮೆಯಿಂದ ಕಾಣದೆ, ಗೌರವ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕನ್ನು ಅನುಭವಿಸುವಂತಾಗಬೇಕೆAದು ಕೊಡವ ಭಾಷಿಕ ಸಮುದಾಯಗಳ ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅಭಿಮತ ವ್ಯಕ್ತಪಡಿಸಿದರು.
ಕೊಡವ ಭಾಷೆ, ಸಂಸ್ಕೃತಿ, ಪದ್ಧತಿ, ಸಂಪ್ರದಾಯಗಳು ಇಂದು ಸಮಾಜದಲ್ಲಿ ಜೀವಂತವಾಗಿ ಮುಂದುವರಿಯುತ್ತಿದೆಯೆAದರೆ ಅದಕ್ಕೆ ಪ್ರಬಲ ಕಾರಣ ಕೊಡವ ಭಾಷಿಕ ೨೧ ಮೂಲನಿವಾಸಿ ಜನಾಂಗದವರ ಕೊಡುಗೆಯಾಗಿದೆ ಎಂದರಲ್ಲದೆ, ಒಂದಲ್ಲ ಒಂದು ರೀತಿಯಲ್ಲಿ ಭಾಷಿಕ ಜನಾಂಗ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕೊಡವ ಮಡಿವಾಳ ಸಮಾಜದ ಅಧ್ಯಕ್ಷ ಪಾತಂಡ ರಂಜನ್ ಸಂತೋಷ್ ವಹಿಸಿ ಮಾತನಾಡಿ, ಜನಾಂಗವನ್ನು ಒಂದೆಡೆ ಸೇರಿಸಿ ಒಗ್ಗಟ್ಟನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜವನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜನಾಂಗೀಯ ಕ್ರೀಡಾಕೂಟ, ಭವಿಷ್ಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಮರಣಾನಿಧಿ ಸ್ಥಾಪನೆ... ಮುಂತಾದವುಗಳನ್ನು ಸಮಾಜದ ಮೂಲಕ ಸ್ಥಾಪಿಸಿ, ಜನಾಂಗದ ಅಭಿವೃದ್ಧಿಗೆ, ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದೆಂದರು.
ಸಮಾರAಭದಲ್ಲಿ ದೇಶ ರಕ್ಷಣೆಯೊಂದಿಗೆ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಲೆಫ್ಟಿನೆಂಟ್ ಬಳಪಂಡ ಡಾಲಿ, ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ಬಳಪಂಡ ಪಂಚಮಿ ಹಾಗೂ ಕ್ರಿಕೆಟ್ ಪಂದ್ಯಾಟದಲ್ಲಿ ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಶೇಷಚೇತನ ಮಲ್ಲಾರಂಡ ಸಾಗರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಮೇಕಂಡ ಗಣೇಶ್ ತಿಮ್ಮಯ್ಯ, ಮಾಚೀರ ವಾಣಿ, ಗೌರವ ಅಧ್ಯಕ್ಷ ಮಂಜೀರ ಅಪ್ಪಾಜಿ, ಖಜಾಂಚಿ ಮೇಕಂಡ ನಿತಿನ್ ಲೋಕೇಶ್, ಸಲಹೆಗಾರ ಮೇನಿಯಂಡ ಬಿದ್ದಪ್ಪ, ನಿರ್ದೇಶಕರಾದ ಕಿಶನ್ ದೇವಯ್ಯ, ಮಾಣಿಚಂಡ ಸಾಬು ಪಳಂಗಪ್ಪ, ಮಚ್ಚಿರ ಜೀವನ್, ಮಂದAಡ ಚಿಂತನ್, ಮಲ್ಲಿರಾ ಜಗದೀಶ್ ಕಾಳಪ್ಪ, ಮೇಕಂಡ ಪಾಪು ಲೋಕೇಶ್, ಬಳಪಂಡ ಅರುಣ್, ಮಾಚಮಂಡ ಮಮತಾ, ಮಳುವಂಡ ಕನ್ನಿಕೆ, ಮೇಕಂಡ ನವೀನ್, ಭಾಗ್ಯಂಡ ವೇಣು ಉಪಸ್ಥಿತರಿದ್ದರು.
ಅಮ್ಮಳೇರಾ ವೀಣಾ ಪ್ರಾರ್ಥಿಸಿದರು, ಬಳಪಂಡ ಬಿದ್ದಪ್ಪ ಸ್ವಾಗತಿಸಿ, ನಿರೂಪಿಸಿದರು. ಕಳೆದ ಸಾಲಿನ ಮಹಾಸಭೆ ವರದಿಯನ್ನು ಕಾರ್ಯದರ್ಶಿ ಬಳಪಂಡ ಬೆಳ್ಯಪ್ಪ ವಾಚಿಸಿದರು. ಸಹಕಾರ್ಯದರ್ಶಿ ಮಾಚಮಂಡ ಈಶ್ವರ್ ಲೆಕ್ಕಪತ್ರ ಮಂಡಿಸಿದರು. ಮೇಕಂಡ ಸುನಿಲ್ ಮಾದಪ್ಪ ವಂದಿಸಿದರು.