ಮಡಿಕೇರಿ, ಏ. ೩೦: ಕೊಡವ ಕೌಟುಂಬಿಕ ಹಾಕಿ ಉತ್ಸವದ ನಡುವೆ ಕಳೆದ ವರ್ಷದಿಂದ ಆರಂಭಿಸಲಾಗಿರುವ ಕೌಟುಂಬಿಕ ಮಹಿಳಾ ಹಾಕಿ ಪಂದ್ಯದ ಈ ಬಾರಿಯ ಚಾಂಪಿಯನ್ ಆಗಿ ಕಡಗದಾಳುವಿನ ಕೆಚ್ಚೆಟ್ಟಿರ ತಂಡ ಹೊರಹೊಮ್ಮಿದೆ.

ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಜರುಗಿದ ಚೇನಂಡ ಕಪ್ ಮಹಿಳಾ ಹಾಕಿ ಫೈನಲ್‌ನಲ್ಲಿ ಕೆಚ್ಚೆಟ್ಟಿರ ತಂಡ ಕಳೆದ ಬಾರಿಯ ಚಾಂಪಿಯನ್ ಕಂಬೀರAಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೩-೧ ಗೋಲಿನಿಂದ ಪರಾಭವಗೊಳಿಸಿ ನೂತನ ಚಾಂಪಿಯನ್ ಆಗಿದೆ.

ವಿಶೇಷವೆಂದರೆ ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ಮುದ್ದಂಡ ಕಪ್ ಮಹಿಳಾ ಹಾಕಿ ಉತ್ಸವದಲ್ಲಿ ಕಂಬೀರAಡ ಹಾಗೂ ಕೆಚ್ಚೆಟ್ಟಿರ ಕುಟುಂಬವೇ ಫೈನಲ್ ಪ್ರವೇಶಿಸಿತ್ತು.

ಇದರಲ್ಲಿ ಕಂಬೀರAಡ ಕೆಚ್ಚೆಟ್ಟಿರ ತಂಡವನ್ನು ಮಣಿಸಿ ಪ್ರಶಸ್ತಿ ಗಳಿಸಿದರೆ, ಕೆಚ್ಚೆಟ್ಟಿರ ರನ್ನರ್ಸ್ ಆಗಿತ್ತು. ಆದರೆ ಈ ಬಾರಿ ಕೆಚ್ಚೆಟ್ಟಿರ ತಂಡ ಕಳೆದ ವರ್ಷದ ಸೋಲಿನ ಸೇಡು ತೀರಿಸಿಕೊಂಡAತಾಗಿರುವುದು ವಿಶೇಷ.

ಚೇನಂಡ ಕಪ್‌ನ ಮೊದಲ ಸೆಮಿಫೈನಲ್ ಬಳಿಕ ಮಹಿಳಾ ಹಾಕಿ ಫೈನಲ್ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಜಮಾಯಿಸಿ ಇತ್ತಂಡಗಳನ್ನು ಉತ್ತೇಜಿಸುತ್ತಿದ್ದರು.

ಈ ಪಂದ್ಯಾವಳಿಯ ಅತಿಥಿಗಳಾಗಿದ್ದ ಮಾಜಿ ಇಂಡಿಯನ್ ಕ್ಯಾಂಪರ್ ಕನ್ನಂಡ ರಾಣಿ ಕರುಂಬಯ್ಯ ಕೊಡಗಿನವರಾದ ಚಿತ್ರನಟಿ ಉಳ್ಳಿಯಡ ಹರ್ಷಿಕಾ ಪೊನ್ನಣ್ಣ ಪಾಲ್ಗೊಂಡಿದ್ದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಮಹಿಳಾ ಹಾಕಿ ಆಯೋಜನೆಯ ಪ್ರಮುಖರಾದ ಮುದ್ದಂಡ ರಶಿನ್ ಸುಬ್ಬಯ್ಯ, ಚೇನಂಡ ಕುಟುಂಬದ ಪ್ರಮುಖರು ಪಾಲ್ಗೊಂಡಿದ್ದರು.

ರಾಣಿ ಕರುಂಬಯ್ಯ ಹಾಗೂ ಹರ್ಷಿಕಾ ಪೊನ್ನಣ್ಣ ಅವರುಗಳು ಮಹಿಳಾ ಹಾಕಿ ಪಂದ್ಯಾವಳಿಯಿAದ ಮಹಿಳಾ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರೆತಂತಾಗಿದೆ ಎಂದರು.

ರೋಚಕವಾಗಿ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲು ಬಾರಿಸಿದ್ದವು. ಕಂಬೀರAಡ ಮಿಲನ ಪ್ರಕಾಶ್ ಹಾಗೂ ಆನ ಅಪ್ಪಯ್ಯ ಗೋಲುಗಳಿಸಿದರೆ, ಕೆಚ್ಚೆಟ್ಟಿರ ಪರ ಲಕ್ಷö್ಯ ಪೊನ್ನಪ್ಪ, ತೇಜಸ್ವಿ ದೇವಯ್ಯ ಗೋಲು ಗಳಿಸಿದರು. ಶೂಟೌಟ್‌ನಲ್ಲಿ ಕೆಚ್ಚೆಟ್ಟಿರ ಪಾರ್ವತಿ, ಲಕ್ಷö್ಯ ಗೋಲು ಬಾರಿಸಿದರೆ, ಕಂಬೀರAಡ ಪರ ಪೊನ್ನಮ್ಮ ಮಾತ್ರ ಗೋಲು ಗಳಿಸಿದರು. ತೀರ್ಪುಗಾರರಾಗಿ ಅಮ್ಮುಣಿಚಂಡ ವಿಘ್ನೇಶ್ ಬೋಪಣ್ಣ ಹಾಗೂ ಚೀಯಕಪೂವಂಡ ಚರಣ್ ಪಳಂಗಪ್ಪ ಕಾರ್ಯನಿರ್ವಹಿಸಿದರು. ಚೋಕಿರ ಅನಿತಾ ಹಾಗೂ ಬೊಟ್ಟೋಳಂಡ ಸೌಮ್ಯ ವೀಕ್ಷಕ ವಿವರಣೆ ನೀಡಿದರು.

ಮಹಿಳಾ ಹಾಕಿ ಪಂದ್ಯಾವಳಿಯನ್ನು ಬೆಂಗಳೂರಿನ ಲೇಕ್‌ಸೈಡ್ ಹಾಕಿ ಕ್ಲಬ್‌ನ ಸದಸ್ಯರುಗಳು (ಕೊಡಗಿನವರು) ಈ ಬಾರಿಯೂ ನಡೆಸಿಕೊಟ್ಟರು. ಕೊಡವ ಹಾಕಿ ಅಕಾಡೆಮಿ ಚೇನಂಡ ಕುಟುಂಬ ಸಹಕಾರ ನೀಡಿತ್ತು. ಲೇಕ್‌ಸೈಡ್ ಕ್ಲಬ್‌ನ ಸದಸ್ಯರುಗಳಾದ ಮುದ್ದಂಡ ರಶಿನ್ ಸುಬ್ಬಯ್ಯ, ಅಮ್ಮುಣಿಚಂಡ ಬೋಪಣ್ಣ, ಕನ್ನಂಡ ಅರುಣ್ ನಾಚಪ್ಪ, ಚೀಯಕಪೂವಂಡ ಚರಣ್, ಪುಳ್ಳಂಗಡ ಅಪ್ಪಣ್ಣ, ಮೋರ್ಕಂಡ ಲೋಕೇಶ್, ಮೋರ್ಕಂಡ ಭುವನ್, ನಾಳಿಯಂಡ ಕವನ್, ಬಲ್ಲಚಂಡ ಉತ್ತಪ್ಪ, ನಾಪಂಡ ಕವನ್, ನುಚ್ಚಿಮಣಿಯಂಡ ಪೂವಣ್ಣ, ತಾತಂಡ ಸೋಮಯ್ಯ, ಮುದ್ದಂಡ ಚಂಗಪ್ಪ, ಕುಲ್ಲೇಟಿರ ನಾಚಪ್ಪ, ಕುಲ್ಲೇಟಿರ ಶುಭಂ ಚಿಟ್ಟಿಯಪ್ಪ, ಮುಂಡAಡ ಪ್ರಧಾನ್ ಈ ತಂಡದಲ್ಲಿದ್ದರು.