ನಾಪೋಕ್ಲು, ಏ. ೨೯ : :ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು.
ಉತ್ಸವದ ಅಂಗವಾಗಿ ಗುರುವಾರ ತಕ್ಕರ ಮನೆಯಿಂದ ಬಂಡಾರ ತಂದು ಬಳಿಕ ಮಹಾಪೂಜೆ ತೀರ್ಥ ಪ್ರಸಾದ ವಿತರಿಸಲಾಯಿತು. ಆನಂತರ ಹರಕೆ ರೂಪದಲ್ಲಿ ಭಕ್ತಾದಿಗಳು ವಿವಿಧ ವೇಷಗಳನ್ನು ಧರಿಸಿ ಬೇಡು ಹಬ್ಬ ಜರುಗಿತ್ತು. ಶುಕ್ರವಾರ ಬೆಳಿಗ್ಗೆ ಕಾರೇರಿಯಂಡ ತಕ್ಕರಲ್ಲಿಂದ ಮೆರವಣಿಗೆಯಲ್ಲಿ ಬಾಳು ಬಂಡಾರ ತರಲಾಯಿತು. ಬಳಿಕ ಆರಾಟ್, ಬೊಳಕಾಟ್ ನಡೆದು ನಂತರ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸೇವೆಗಳನ್ನು ದೇವರಿಗೆ ಹರಕೆ ಒಪ್ಪಿಸಿದರು. ಉತ್ಸವದಲ್ಲಿ ಭಗವತಿ, ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಬೇಡು ಹಬ್ಬ, ಪೀಲಿಯಾಟ್ , ಕ್ಷೇತ್ರಪಾಲ, ಸಾರ್ತಾವು, ಭದ್ರಕಾಳಿ ತೆರೆಮುಡಿ. ಮೂರು ದೈವಗಳ ಕೋಲಗಳನ್ನು ಭಕ್ತರು ವೀಕ್ಷಿಸಿ ಸಂಭ್ರಮಿಸಿ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳು ಶ್ರದ್ಧಾ ಭಕ್ತಿಯಿಂದ ಜರುಗಿತ್ತು .
ಈ ಸಂದರ್ಭ ಶಾಸಕ ಎ.ಎಸ್ ಪೊನ್ನಣ್ಣ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾಡಿನ ಸಮಸ್ತ ಭಕ್ತಾದಿಗಳಿಗೆ ಹಾಗೂ ಜೀವ ಸಂಕುಲಕ್ಕೆ ಭಗವಂತ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಉತ್ಸವದಲ್ಲಿ. ದೇವಾಲಯದ ಆಡಳಿತ ಮಂಡಳಿ ಎಡಿಕೇರಿ ಇ. ಗೋಪಾಲ ಉಪಾಧ್ಯಕ್ಷ ಚೋಕಿರ ಚೆಂಗಪ್ಪ, ಕಾರ್ಯದರ್ಶಿ ಎಡಿಕೇರಿ ಮಧು , ತಕ್ಕ ಮುಖ್ಯಸ್ಥರಾದ ಎಡಿಕೇರಿ ವಾಸು ಸೇರಿದಂತೆ ಇನ್ನಿತರ ಮುಖ್ಯಸ್ಥರು, ವಿವಿಧ ಪಕ್ಷದ ಪ್ರಮುಖರು ಸೇರಿದಂತೆ ಊರ ಪರ ಊರ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.