ಮಡಿಕೇರಿ, ಏ. ೨೯ : ಕೊಡಗು ಪತ್ರಿಕಾ ಭವನ ಟ್ರಸ್ಟ್ನಿಂದ ಈ ಬಾರಿಯೂ ೨೦೨೬-೨೭ನೇ ಸಾಲಿಗೆ ಸಂಬAಧಿಸಿದAತೆ ಶೈಕ್ಷಣಿಕ ನೆರವನ್ನು ವಿತರಿಸಲು ನಿರ್ಧರಿಸಲಾಗಿದೆ. ಶಿಕ್ಷಣಕ್ಕಾಗಿ ವಿತರಿಸಲಾಗುವ ಆರ್ಥಿಕ ನೆರವನ್ನು ಪ್ರಾಥಮಿಕ ಶಾಲೆಯಿಂದ ಪದವಿ ತರಗತಿಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪತ್ರಕರ್ತರ ಮಕ್ಕಳು ಪಡೆಯಲು ಅರ್ಹರಾಗಿರುತ್ತಾರೆ. ನೆರವು ಪಡೆಯಲು ಇಚ್ಛಿಸುವವರು ಅಂಕಪಟ್ಟಿ, ಶಾಲೆಗೆ ಪಾವತಿಸಿದ ಶುಲ್ಕದ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ೧೬.೦೫.೨೦೨೬ರ ಸಂಜೆ ೫ ಗಂಟೆಯೊಳ ಗಾಗಿ ಸಲ್ಲಿಸಬಹುದು. ಅರ್ಜಿಗಳನ್ನು ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಪತ್ರಿಕಾ ಭವನ ಟ್ರಸ್ಟ್(ರಿ), ಪತ್ರಿಕಾ ಭವನ, ಕೈಗಾರಿಕಾ ಬಡಾವಣೆ.ಮಡಿಕೇರಿ-೫೭೧೨೦೧ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಈ ಶೈಕ್ಷಣಿಕ ನೆರವನ್ನು ಪಡೆಯಲು ಇಚ್ಛಿಸುವ ಕೊಡಗು ಜಿಲ್ಲೆಯ ಪತ್ರಕರ್ತರು ನಿಗದಿತ ದಿನಾಂಕ ದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವಂತೆ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್. ಜಿ. ಉಮೇಶ್ ತಿಳಿಸಿದ್ದಾರೆ.