ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಏ. ೨೯: ಕೊಡವ ಕೌಟುಂಬಿಕ ಹಾಕಿ ಉತ್ಸವ ಇದೀಗ ನಿರ್ಣಾಯಕ ಘಟ್ಟದತ್ತ ಸಾಗಿದೆ. ೨೬ನೆಯ ವರ್ಷದ ಕೌಟುಂಬಿಕ ಹಾಕಿ ಚಾಂಪಿಯನ್ ಯಾರು..? ಎಂಬ ಕೌತುಕಕ್ಕೆ ಇನ್ನೆರೆಡೇ ಹೆಜ್ಜೆ ಬಾಕಿ ಇದೆ. ಪ್ರತಿಷ್ಠಿತ ಚೇನಂಡ ಕಪ್‌ನ ಸೆಮಿಫೈನಲ್ ಪಂದ್ಯಾವಳಿ ತಾ. ೩೦ ರಂದು (ಇಂದು) ನಡೆಯಲಿದೆ. ಹಲವು ಏಳು-ಬೀಳುಗಳ ನಡುವೆ ಕೆಲವು ಫೇವರೇಟ್ ತಂಡಗಳು ಪಂದ್ಯಾವಳಿಯಿAದ ನಿರ್ಗಮಿಸಿದ್ದು, ಈ ಬಾರಿಯ ಸೆಮಿಫೈನಲ್ ಹೊಸತೊಂದು ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಫೈನಲ್ ಪಂದ್ಯಕ್ಕೆ ರಹದಾರಿ ಪಡೆಯಲು ಮಾಜಿ ಚಾಂಪಿಯನ್ ತಂಡಗಳಾದ ಪಳಂಗAಡ ಹಾಗೂ ಈ ಹಿಂದಿನ ಉತ್ಸವಗಳಲ್ಲಿ ಫೈನಲ್ ತಲುಪಿದ್ದ ಪ್ರಶಸ್ತಿಯಿಂದ ವಿಫಲವಾಗಿರುವ ಮಾಜಿ ರನ್ನರ್ಸ್ ತಂಡಗಳಾದ ಚೆಪ್ಪುಡಿರ ಹಾಗೂ ಪರದಂಡ ತಂಡಗಳ ನಡುವೆ ಹೋರಾಟ ನಡೆಯಲಿದೆ. ಬುಧವಾರ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಕದನದಲ್ಲಿ ಪಳಂಗAಡ ಕುಲ್ಲೇಟಿರ, ಚೆಪ್ಪುಡಿರ ಹಾಗೂ ಪರದಂಡ ತಂಡಗಳು ಜಯಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ತಂಡಗಳಿಗೆ ಪ್ರಬಲ ಹೋರಾಟ ನೀಡಿದ ಪೆಮ್ಮಂಡ, ನೆಲ್ಲಮಕ್ಕಡ, ಕಂಬೀರAಡ ಹಾಗೂ ಮೂಕೋಂಡ ತಂಡಗಳು ಪರಾಭವಗೊಂಡು ನಿರಾಶೆ ಅನುಭವಿಸಿತು.
ಪಳಂಗAಡ v/s ಪೆಮ್ಮಂಡ
ಮೊದಲ ಕ್ವಾರ್ಟರ್ ಫೈನಲ್ ಪಳಂಗAಡ ಹಾಗೂ ಪೆಮ್ಮಂಡ ತಂಡಗಳ ನಡುವೆ ನಡೆಯಿತು. ಈ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದ ಪೆಮ್ಮಂಡ ಸೆಮಿಫೈನಲ್ ತಲುಪುವಲ್ಲಿ ವಿಫಲವಾಯಿತು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪಳಂಗAಡ ತಂಡ ೩-೨ ಗೋಲುಗಳಿಂದ ಜಯಗಳಿಸಿತು. ಪಳಂಗAಡ ಪರ ಮ್ಯಾಂಡಿ ಮಂದಣ್ಣ (೨) ಹಾಗೂ ಅಮರ್ ಅಯಮ್ಮ ಗೋಲು ಗಳಿಸಿದರೆ, ಪೆಮ್ಮಂಡ ಪರ ಚರಣ್ ಪೊನ್ನಪ್ಪ ಹಾಗೂ ಪ್ರಥಮ್ ಕರುಂಬಯ್ಯ ಗೋಲು ಬಾರಿಸಿದರು.
ಕುಲ್ಲೇಟಿರ v/s ನೆಲ್ಲಮಕ್ಕಡ
ಎರಡನೇ ಕ್ವಾರ್ಟರ್ ಫೈನಲ್ ಮಾಜಿ ಚಾಂಪಿಯನ್‌ಗಳಾದ ಕುಲ್ಲೇಟಿರ ಹಾಗೂ ನೆಲ್ಲಮಕ್ಕಡ ನಡುವೆ ರೋಮಾಂಚನಕಾರಿಯಾಗಿ ನಡೆಯಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು ತಲಾ ಒಂದು ಗೋಲು ಬಾರಿಸಿದರು. ನಂತರ ನಡೆದ ಶೂಟೌಟ್‌ನಲ್ಲಿ ನೆಲ್ಲಮಕ್ಕಡ ಮುಗ್ಗರಿಸಿತು. ನಿಗದಿತ ಅವಧಿಯಲ್ಲಿ ಕುಲ್ಲೇಟಿರ ಯಶಕ್ ಮುತ್ತಣ್ಣ ಹಾಗೂ ನೆಲ್ಲಮಕ್ಕಡ ರಿಶಿತ್ ಸೋಮಯ್ಯ ಗೋಲು ದಾಖಲಿಸಿದ್ದರು. ಶೂಟೌಟ್‌ನಲ್ಲಿ ಕುಲ್ಲೇಟಿರ ಯಶಿನ್ ಉತ್ತಯ್ಯ, ಶುಭಂ ಚಿಟ್ಟಿಯಪ್ಪ ಗೋಲು ಬಾರಿಸಿದರೆ, ನೆಲ್ಲಮಕ್ಕಡ ಆಟಗಾರರು ವಿಫಲರಾದರು.
ಚೆಪ್ಪುಡಿರ v/s ಕಂಬೀರAಡ
ಚೆಪ್ಪುಡಿರ ಹಾಗೂ ಕಂಬೀರAಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ ೪-೨ ಗೋಲಿನಿಂದ ಜಯಗಳಿಸಿತು. ಚೆಪ್ಪುಡಿರ ಪರ ಲೆನನ್ (೨) ಹಾಗೂ ಸೋಮಣ್ಣ, ನರೇನ್ ತಲಾ ಒಂದೊAದು ಗೋಲು ಬಾರಿಸಿದರು. ಕಂಬೀರAಡ ಪರ ಮಯೂರ್ ಬೋಪಯ್ಯ ಹಾಗೂ ಮಹಿತ್ ಮೊಣ್ಣಪ್ಪ ಗೋಲು ಗಳಿಸಿದರು.
ಪರದಂಡ v/s ಮೂಕೋಂಡ
ಕೊನೆಯ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ ತಂಡ ಮೂಕೋಂಡ ತಂಡವನ್ನು ೬-೨ ಗೋಲುಗಳಿಂದ ಪರಾಭವಗೊಳಿಸಿತು. ಪರದಂಡ ತಂಡದ ಪರ ರಂಜನ್ ಅಯ್ಯಪ್ಪ ಹ್ಯಾಟ್ರಿಕ್ ಸೇರಿದಂತೆ ಒಟ್ಟು ೫ ಗೋಲು ಬಾರಿಸಿ ಗಮನ ಸೆಳೆದರು. ಪ್ರಜ್ವಲ್ ಮತ್ತೊಂದು ಗೋಲು ಬಾರಿಸಿದರು. ಮೂಕೋಂಡ ಪರ ಉಜ್ವಲ್ ಹಾಗೂ ನಿಖಿಲ್ ತಲಾ ಒಂದೊAದು ಗೋಲು ದಾಖಲಿಸಿದರು.