ವೀರಾಜಪೇಟೆ, ಏ. ೨೯: ಕೊಡಗು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ನಡುವೆ ಮುಲ್ಲೇಂಗಡ ಕಬಡ್ಡಿ ನಮ್ಮೆಯನ್ನು ಆಯೋಜಿಸಲಾಗಿದ್ದು ಮೇ ೬ ರಿಂದ ೯ರವರೆಗೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮುಲ್ಲೇಂಗಡ ಕುಟುಂಬದ ಅಧ್ಯಕ್ಷ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.
ವಿರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕಬಡ್ಡಿ ಪಂದ್ಯಾಟದ ಟೈಸ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಪ್ರಥಮ ಬಾರಿಗೆ ಕೌಟುಂಬಿಕ ಕಬಡ್ಡಿಯಾಗಿ ನಡೆಸಲು ಉದ್ದೇಶಿಸಿ ಮುಲ್ಲೇಂಗಡ ಕುಟುಂಬ ಆತಿಥ್ಯ ವಹಿಸಿಕೊಂಡಿದೆ. ೫೪ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿವೆ. ನಾಕೌಟ್ ಮಾದರಿಯ ಪಂದ್ಯಾಟ ದಲ್ಲಿ ಕರ್ನಾಟಕ ಪ್ರೋ ಕಬಡ್ಡಿಯ ನಿಯಮಗಳನ್ನು ಅಳವಡಿಸಲಾಗಿದೆ. ಡೂ ಆರ್ ಡೈ, ಸೂಪರ್ ಟ್ಯಾಕಲ್ ಇರುತ್ತದೆ. ಒಂದು ತಂಡದಲ್ಲಿ ೭+೩ ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ. ಮ್ಯಾಟ್ ಕಬಡ್ಡಿ ಪಂದ್ಯಾಟವಾದ ಕಾರಣ ಆಟಗಾರರು ಶೂ ಬಳಕೆ ಕಡ್ಡಾಯ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಕಿಟ್ಟು ಕುಟ್ಟಪ್ಪ, ಸಂಚಾಲಕ ಮಧೋಷ್ ಪೂವಯ್ಯ, ಖಂಜಾAಚಿ ಸುರೇಶ್ ಭೀಮಯ್ಯ ಉಪಸ್ಥಿತರಿದ್ದರು.