ಸಿದ್ದಾಪುರ, ಏ. ೨೮: ಸಿದ್ದಾಪುರ ಸಮೀಪದ ಮೈಸೂರು ರಸ್ತೆಯ ಹೇರೂರು ವಾರಾಹಿ ರೂಪಿನಿ ಶ್ರೀ ದೊಡ್ಡಮ್ಮ ತಾಯಿ ದೇವಾಲಯದ ೩೨ನೇ ವರ್ಷದ ವಾರ್ಷಿಕೋತ್ಸವದ ವಿವಿಧ ಪೂಜಾ ಕಾರ್ಯಕ್ರಮಗಳು ಮೇ ೨ ಮತ್ತು ೩ ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ರೋಹಿತ್ ರೈ ತಿಳಿಸಿದ್ದಾರೆ.
ಮೇ ೨ ರಂದು ಸಂಜೆ ೫.೩೦ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ ಮತ್ತು ಸುದರ್ಶನ ಹೋಮ, ಪ್ರಾಕಾರ ಬಲಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮೇ ೩ ರಂದು ಬೆಳಿಗ್ಗೆ ೬ ಗಂಟೆಯಿAದ ಗಣಪತಿ ಹೋಮ, ದುರ್ಗಾ ಹೋಮ, ನವಕ ಕಲಾಶಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ತೀರ್ಥ ಪ್ರಸಾದ, ನಂತರ ಮಹಾಪೂಜೆ ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.