ಮಡಿಕೇರಿ, ಏ. ೨೮: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ರಾಜ್ಯ ಮಟ್ಟದ ಕನಕ ಕವನ ಸ್ಪರ್ಧೆ ಏರ್ಪಡಿಸಲು ಉದ್ದೇಶಿಸಿದೆ. ೧೮ ರಿಂದ ೩೦ ವರ್ಷ ವಯೋಮಿತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ವರಚಿತ ಕವನವನ್ನು ಆಹ್ವಾನ ನೀಡಿದ ದಿನಾಂಕದಿAದ ಎರಡು ತಿಂಗಳ ಒಳಗೆ ಅಂದರೆ ಜೂನ್ ೨೨ ರೊಳಗೆ ಸ್ಪರ್ಧೆಗೆ ಒಂದು ಕವನವನ್ನು ರಚಿಸಿ ಕಳುಹಿಸಿಕೊಡಬೇಕು.
ಭಾಗವಹಿಸುವ ಸ್ಪರ್ಧಿಯು ಅರ್ಜಿ ಮತ್ತು ಕವನವನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು - ೫೬೦೦೫೬ ಇಲ್ಲಿಗೆ ಅರ್ಜಿಯನ್ನು ಅಂಚೆ/ ಕೊರಿಯರ್/ ಇ-ಮೇಲ್ ಅಥವಾ ಖುದ್ದಾಗಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ವೆಬ್ಸೈಟ್ hಣಣಠಿs://ಞಚಿಟಿಚಿಞಚಿಜಚಿsಚಿಡಿeseಚಿಡಿಛಿhಛಿeಟಿಣeಡಿ.ಞಚಿಡಿಟಿಚಿಣಚಿಞಚಿ.gov.iಟಿ/ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅರ್ಜಿಯನ್ನು ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೯೭೪೩೫೪೫೮೬೫ ನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ತತ್ವಪದಕಾರರ ಅಧ್ಯಯನ ಕೇಂದ್ರದ ಸಂತಕವಿ ಕನಕದಾಸ ಮತ್ತು ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.