ಮಡಿಕೇರಿ, ಏ. ೨೭: ಇಂಡಿಯನ್ ಪೊಟಾಷ್ ಲಿಮಿಟೆಡ್ (ಐಪಿಎಲ್) ಸಂಸ್ಥೆಯಿAದ ಸರಬರಾಜಾದ ಗೊಬ್ಬರದ ತೂಕದಲ್ಲಿ ವ್ಯತ್ಯಾಸ ಉಂಟಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಐಪಿಎಲ್‌ನ ಡಿಜಿಎಂ ಲೋಗಮೂರ್ತಿ ಅವರು ಕ್ಷಮೆಯಾಚಿಸಿದ ಘಟನೆ ನಡೆಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಸಭಾಂಗಣದಲ್ಲಿ ಜಂಟಿ ಕೃಷಿ ನಿರ್ದೇಶಕರ ಉಪಸ್ಥಿತಿಯಲ್ಲಿ ಗೊಬ್ಬರ ಮಾರಾಟ ಸಂಸ್ಥೆಗಳ ಜಿಲ್ಲಾಮಟ್ಟದ ಪ್ರತಿನಿಧಿಗಳು ಸಹಕಾರ ಸಂಘಗಳ ಅಧ್ಯಕ್ಷರುಗಳನ್ನೊಳಗೊಂಡು ಇಂದು ಸಭೆ ಏರ್ಪಡಿಸಲಾಗಿತ್ತು. ಗೊಬ್ಬರ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಇತ್ತೀಚಿಗೆ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಬೆಳಕಿಗೆ ತಂದ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಗೊಬ್ಬ ತೂಕದಲ್ಲಿ ವ್ಯತ್ಯಾಸದ ಬಗ್ಗೆ ಸಹಕಾರ ಸಂಘದ ಅಧ್ಯಕ್ಷರುಗಳು, ಕೃಷಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತೂಕದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಆದರೂ ಅವರುಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆರೋಪವೂ ವ್ಯಕ್ತವಾಯಿತು. ಗೊಬ್ಬರ ತೂಕದಲ್ಲಿ ವ್ಯತ್ಯಾಸವಿರುವುದು ಬೆಳಕಿಗೆ ಬಂದ ಮೇಲೂ ಸಂಬAಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕ್ರಮಕೈಗೊಂಡಿಲ್ಲ ಎಂಬ ಆಪಾದನೆಯೂ ಸಭೆಯಲ್ಲಿ ಕೇಳಿಬಂತು.

ಬಳಿಕ ಸಭೆಯಲ್ಲಿ ಹಾಜರಿದ್ದ ಐಪಿಎಲ್‌ನ ಡಿಜಿಎಂ ಲೋಗಮೂರ್ತಿ ಅವರಿಂದ ತೂಕದಲ್ಲಿ ವ್ಯತ್ಯಾಸ ಸಂಬAಧ ಸ್ಪಷ್ಟನೆ ನೀಡಲು ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಲೋಗಮೂರ್ತಿ ಅವರು, ತಮಿಳುನಾಡಿನ ತೂತುಕುಡಿಯಲ್ಲಿ ಗೊಬ್ಬರವನ್ನು ಬ್ಯಾಗಿಂಗ್ ಮಾಡುವ ಕೆಲಸ ನಡೆಯುತ್ತದೆ. ತಮ್ಮ ಕಂಪೆನಿಯ ಗೊಬ್ಬರದ ತೂಕದಲ್ಲಿ ವ್ಯತ್ಯಾಸ ಕಂಡುಬAದಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ತಾನು ಕ್ಷಮೆ ಕೋರುತ್ತೇನೆ. ಮುಂದೆ ಹೀಗಾಗದ ರೀತಿ ಎಚ್ಚರ ವಹಿಸುತ್ತೇನೆ ಎಂದು ಭರವಸೆಯಿತ್ತರು. ಅಲ್ಲದೆ ಈಗಾಗಲೇ ತೂಕದಲ್ಲಿ ವ್ಯತ್ಯಾಸ ಕಂಡುಬAದಿರುವ ಗೊಬ್ಬರದ ಚೀಲಗಳನ್ನು ತಮ್ಮದೇ ವಾಹನಗಳ ಮೂಲಕ ಹಿಂಪಡೆದು ಸರಿಯಾದ ತೂಕದ ಗೊಬ್ಬರ ಚೀಲಗಳನ್ನು ಒದಗಿಸುವುದಾಗಿ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಈಗಾಗಲೇ ಐಪಿಎಲ್ ಗೊಬ್ಬರ ಕಂಪೆನಿ ಹಾಗೂ ಈ ಗೊಬ್ಬರ ಸಗಟು ವ್ಯಾಪಾರಿಗಳಿಗೆ ನೋಟೀಸ್ ನೀಡಿರುವುದಾಗಿ ತಿಳಿಸಿದರು. ಕೃಷಿ ಇಲಾಖೆಯು ಸಂಬAಧಿಸಿದ ಗೊಬ್ಬರ ಕಂಪೆನಿಯ ಮೇಲೆ ಕ್ರಮಕೈಗೊಳ್ಳಲೇ ಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು.

ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಐಪಿಎಲ್ ಕಂಪೆನಿ ಗೊಬ್ಬರ ಎಲ್ಲೆಲ್ಲಿ ಸರಬರಾಜಾಗಿದೆಯೋ ಅವುಗಳನ್ನು ತೂಕ ಮಾಡಬೇಕು. ರೈತರು ಖರೀದಿಸಿರುವ ಗೊಬ್ಬರವನ್ನು ರೈತರೇ ಸ್ವತ: ತೂಕ ಮಾಡಬೇಕು. ವ್ಯತ್ಯಾಸ ಕಂಡುಬAದಲ್ಲಿ ಕೃಷಿ ಇಲಾಖೆಯ ಐಪಿಎಲ್ ಕಂಪೆನಿ ಮೂಲಕ ಹಿಂಪಡೆಯಬೇಕು. ಐಪಿಎಲ್ ಸಂಸ್ಥೆಯವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ರೈತರ ನಷ್ಟ ಭರಿಸಬೇಕು ಎಂದು ಒತ್ತಾಯಿಸಿದರು.

ನೋಟೀಸ್‌ಗೆ ಆಕ್ಷೇಪ

ನೀಮ್ ಕೋಟೆಡ್ ಯೂರಿಯ ಹಾಗೂ ಡಿಎಪಿ ರಸಗೊಬ್ಬರವನ್ನು ಪ್ರಸಕ್ತ ಸಾಲಿನ ಏ. ೧ ರಿಂದ ೧೦ರವರಗೆ ಯಥೇಚ್ಚವಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾರಾಟ ಮಾಡಲಾಗಿದೆ. ಯಾವ ಆಧಾರದಲ್ಲಿ ಈ ಮಾರಾಟ ನಡೆದಿದೆ ಎಂಬ ಬಗ್ಗೆ ಕೃಷಿ ಇಲಾಖೆಯಿಂದ ಕೆಲವು ಸಹಕಾರ ಸಂಘಗಳಿಗೆ ನೋಟೀಸ್ ಜಾರಿ ಮಾಡಿ. ೨೪ ಗಂಟೆಯೊಳಗೆ ಸಮಜಾಯಿಷಿಕೆ ನೀಡಲು ಸೂಚಿಸಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗೊಬ್ಬರ ಮಾರಾಟದ ಮಾಹಿತಿ ಬೇಕಿದ್ದರೆ ಪತ್ರ ಬರೆದು ಮಾಹಿತಿ ಕೇಳಬೇಕಿತ್ತು. ಅದನ್ನು ಬಿಟ್ಟು ನೋಟೀಸ್ ಜಾರಿ ಮಾಡಿ ೨೪ ಗಂಟೆಗಳ ಗಡುವು ನೀಡುವ ಅವಶ್ಯಕತೆ ಏನಿತ್ತು ಎಂದು ಅಧ್ಯಕ್ಷ ಬಾಂಡ್ ಗಣಪತಿ ಪ್ರಶ್ನಿಸಿದರು.

೨೪ ಗಂಟೆಗಳ ಗಡುವು ನೀಡಿರುವುದಲ್ಲದೆ ಸಮಜಾಯಿಷಿಕೆ ನೀಡದಿದ್ದರೆ ರಸಗೊಬ್ಬರ ಮಾರಾಟ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿರುವ ಅಧಿಕಾರಿಗಳು ತುಘಲಕ್ ದರ್ಬಾರ್ ನಡೆಸಲು ಮುಂದಾಗಿದ್ದಾರೆ ಎಂಬ ಟೀಕೆಯೂ ಸಭೆಯಲ್ಲಿ ಕೇಳಿಬಂತು. ಪರವಾನಗಿ ಇಲ್ಲದೆ ಗೊಬ್ಬರ ಮಾರುವವರ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಪರವಾನಗಿ ಹೊಂದಿ ಗೊಬ್ಬರ ಮಾರಾಟ ಮಾಡುವವರಿಗೆ ತೊಂದರೆ ಕೊಡುತ್ತಾರೆ. ಅಧಿಕಾರಿಗಳು ಈ ಸಂಬAಧ ಕ್ಷಮೆ ಕೋರಬೇಕೆಂದು ಸಭಿಕರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ನೋಟೀಸ್‌ನಲ್ಲಿ ೨೪ ಗಂಟೆ ಎಂದು ಗಡುವು ನೀಡುವಂತಹ ತಪ್ಪನ್ನು ಯಾವ ಸಹಕಾರ ಸಂಘಗಳೂ ಮಾಡಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡರು. ವೀರಾಜಪೇಟೆ ತಾಲೂಕಿನಲ್ಲಿ ನೀಡಲಾಗಿರುವ ನೋಟೀಸ್‌ನಲ್ಲಿ ಮಾತ್ರ ೨೪ ಗಂಟೆ ಗಡುವು ನೀಡಿರುವುದರಿಂದ ವೀರಾಜಪೇಟೆ ತಾಲೂಕು ಕೃಷಿ ಅಧಿಕಾರಿ ಕೂಡ ಕ್ಷಮೆ ಕೋರಬೇಕೆಂದು ಸಭೆಯಲ್ಲಿದ್ದವರು ಒತ್ತಾಯಿಸಿದ ಕಾರಣ ಅಧಿಕಾರಿ ದೊರೆರಾಜ್ ಕೂಡ ಕ್ಷಮೆಯಾಚಿಸಿದರು. ಸಭೆಯ ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ಸಿಇಓ ಬೆಳ್ಯಪ್ಪ, ಸಹಕಾರ ಸಂಘದ ಸಹಾಯಕ ನಿಬಂಧಕರಾದ ಶೈಲಜಾ, ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಉಪಸ್ಥಿತರಿದ್ದರು.