ಮಡಿಕೇರಿ, ಏ. ೨೭ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಅಂತಿಮ ಘಟದತ್ತ ಬರುತ್ತಿದ್ದು, ತಾ. ೨೮ ರಿಂದ (ಇಂದು) ಕ್ವಾರ್ಟರ್ ಫೈನಲ್ ಹಣಾಹಣಿ ನಡೆಯಲಿದೆ. ಅದೇ ರೀತಿ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ಮುಕ್ತಾಯಗೊಂಡಿದ್ದು, ಸೆಮಿಫೈನಲ್ ಕದನವೂ ಆರಂಭವಾಗಲಿದೆ.
ಲಾಲು ಮುದ್ದಯ್ಯ ಮೈದಾನ ಮಂಡುವAಡ ಮತ್ತು ಮಲ್ಲಾಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಾಜ್ಜಿರ ತಂಡಕ್ಕೆ ೧೨ ರನ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಲ್ಲಾಜ್ಜಿರ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೩ ರನ್ ಸೇರಿಸಿತು. ಮಂಡುವAಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿ ಸೋಲು ಕಂಡಿತು. ಮಲ್ಲಾಜ್ಜಿರ ರೋಷನ್ ೪೮ ರನ್ ಸೇರಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಮಂಡುವAಡ ದುಷ್ಯಂತ್ ೧೭ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮಲ್ಲಾಜ್ಜಿರ ಪರ ಜಗನ್ ೩ ವಿಕೆಟ್ ಪಡೆದರು.
ಬೊಟ್ಟಂಗಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡಕ್ಕೆ ೬ ವಿಕೆಟ್‌ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೊಟ್ಟಂಗಡ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಚೆಕ್ಕೇರ ೫.೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೧ ರನ್ ಸೇರಿಸಿ ಗೆಲುವು ಸಾಧಿಸಿತು. ಚೆಕ್ಕೇರ ಪರ ಶಾನ್ ೫ ವಿಕೆಟ್ ಗಳನ್ನು ಪಡೆದರು. ಬೊಟ್ಟಂಗಡ ಪ್ರಥು ೨೬ ರನ್ ಸೇರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಬೊಳಕಾರಂಡ (ಕೊಣಂಜಗೇರಿ) ಮತ್ತು ಮೋಟನಾಳಿರ ನಡುವಿನ ಪಂದ್ಯದಲ್ಲಿ ಮೋಟನಾಳಿರ ತಂಡ ೨೧ ರನ್‌ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೋಟನಾಳಿರ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ಬೊಳಕಾರಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೩ ರನ್‌ಸೇರಿಸಿ ಸೋಲೊಪ್ಪಿಕೊಂಡಿತು. ಮೋಟನಾಳಿರ ಶರತ್ ೨೮ ರನ್ ಸೇರಿಸಿದರು. ಬೊಳಕಾರಂಡ ಪರ ೨ ವಿಕೆಟ್ ಕಬಳಿಸಿದ ದರ್ಶನ್ ೨೦ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಕೋಳೆರ ಮತ್ತು ಪಂದ್ಯAಡ ನಡುವಿನ ಪಂದ್ಯದಲ್ಲಿ ಪಂದ್ಯAಡ ೯ ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಳೆರ ೬ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೪೪ ರನ್ ಗಳನ್ನು ಸೇರಿಸಿತು. ಪಂದ್ಯAಡ ೩.೩ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿ ಜಯ ಕಂಡಿತು. ಕೋಳೆರ ೧೭ ರನ್ ದಾಖಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯAಡ ಪರ ಅಯ್ಯಪ್ಪ ೪ ವಿಕೆಟ್ ಗಳನ್ನು ಪಡೆದರು. ಪಂದ್ಯAಡ ದಿಲನ್ ೩೪ ರನ್ ಗಳನ್ನು ಸೇರಿಸಿದರು.
ಮಹಿಳಾ ವಿಭಾಗದ ಫಲಿತಾಂಶ
ಮುಕ್ಕಾಟಿರ (ಬೆಳ್ಳೂರು-ಹರಿಹರ) ಮತ್ತು ಪಾಸುರ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ ೪ ರನ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಕ್ಕಾಟಿರ ೫ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೪೩ ರನ್ ಸೇರಿಸಿತು. ಪಾಸುರ ೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೯ ರನ್‌ಗಳನ್ನು ಗಳಿಸಿ ಸೋಲು ಕಂಡಿತು. ಮುಕ್ಕಾಟಿರ ಅಂಜನಾ ೧೭ ರನ್ ಗಳಿಸಿದರು. ಪಾಸುರ ಅಕ್ಷಿತಾ ೨೨ ರನ್ ಗಳನ್ನು ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಓಡಿಯಂಡ ಮತ್ತು ಚೆಕ್ಕೇರ ನಡುವಿನ ಹಣಾಹಣಿಯಲ್ಲಿ ಚೆಕ್ಕೇರ ೫ ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆಕ್ಕೇರ ೫ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೫ ರನ್ ಗಳಿಸಿತು. ಓಡಿಯಂಡ ೫ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೩೦ ರನ್‌ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು. ಚೆಕ್ಕೇರ ದೇಚಮ್ಮ ೧೫ ರನ್ ಗಳಿಸಿದರು. ೧೦ ರನ್‌ಗಳನ್ನು ಸೇರಿಸಿದ ಓಡಿಯಂಡ ರೋಹಿಣಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.