ಮಡಿಕೇರಿ, ಏ. ೨೭: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ಪಂದ್ಯದಲ್ಲಿAದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕುಲ್ಲೇಟಿರ, ನೆಲ್ಲಮಕ್ಕಡ, ಪೆಮ್ಮಂಡ ಹಾಗೂ ಪಳಂಗAಡ ತಂಡಗಳು ಮುನ್ನಡೆ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟವು. ಇಂದಿನ ಪಂದ್ಯದಲ್ಲಿ ವೀಡಿಯೋ ರೆಫರಲ್ ಸೌಲಭ್ಯವನ್ನು ತಂಡಗಳಿಗೆ ನೀಡಲಾಗಿತ್ತು. ತೀರ್ಪುಗಾರರ ತೀರ್ಪು ತೃಪ್ತಿದಾಯಕವಾಗದಿದ್ದಲ್ಲಿ ತಂಡಗಳು ಈ ಸೌಲಭ್ಯವನ್ನು ಬಳಸುವ ಅವಕಾಶ ನೀಡಲಾಗಿತ್ತು. ಪ್ರತಿ ಪಂದ್ಯವು ೬೦ ನಿಮಿಷಗಳ ಪಂದ್ಯವಾಗಿದ್ದು, ೧೫ ನಿಮಿಷಗಳ ನಾಲ್ಕು ವಿಭಾಗಗಳಲ್ಲಿ (೪ ಕ್ವಾಟರ್ಸ್)ಪಂದ್ಯಗಳು ನಡೆದವು.
ಕುಲ್ಲೇಟಿರ ತಂಡವು ಸಣ್ಣುವಂಡ ತಂಡವನ್ನು ೬-೨ ಗೋಲುಗಳಿಂದ ಮಣಿಸಿತು. ಕುಲ್ಲೇಟಿರ ಅವನೀಶ್ ಮಂದಪ್ಪ ಹ್ಯಾಟ್ರಿಕ್ ಸಾಧನೆ ಗೈದರು.
ನೆಲ್ಲಮಕ್ಕಡ ತಂಡವು ಬಿದ್ದಾಟಂಡ ತಂಡವನ್ನು ೪-೦ ಅಂತರದಲ್ಲಿ ಮಣಿಸಿತು.
ಪೆಮ್ಮಂಡ ತಂಡವು ಟೈ ಬ್ರೇಕರ್ನಲ್ಲಿ ೪-೩ ಗೋಲುಗಳಿಂದ ಪುಳ್ಳಂಗಡ ತಂಡದ ವಿರುದ್ಧ ಜಯ ಸಾಧಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.
ಪಳಂಗAಡ ತಂಡವು ಪಾಡೆಯಂಡ ತಂಡವನ್ನು ೩-೦ ಅಂತರದಲ್ಲಿ ಮಣಿಸಿತು.
ಮಹಿಳಾ ಹಾಕಿ ಫಲಿತಾಂಶ:
ಮಹಿಳಾ ಹಾಕಿ ವಿಭಾಗದಲ್ಲಿ ಆತಿಥೇಯ ಚೇನಂಡ ತಂಡವು ಗೆಲುವು ಸಾಧಿಸಿ ಮುಂದಿನ ಹಂತ ತಲುಪಿತು. ಚೇನಂಡ ತಂಡವು ಚೋಯಮಾಡಂಡ ತಂಡವನ್ನು ಟೈ ಬ್ರೇಕರ್ನಲ್ಲಿ ೧-೦ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು. ೨ನೇ ಪಂದ್ಯದಲ್ಲಿ ಕೆಚ್ಚೆಟ್ಟಿರ ವಿರುದ್ಧ ಚೇನಂಡ ತಂಡವು ೪-೦ ಗೋಲುಗಳಿಂದ ಸೋಲನುಭವಿಸಿತು.
ಶಿವಚಾಳಿಯಂಡ ತಂಡವು ಬಿದ್ದಾಟಂಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು.
ತೆಕ್ಕಡ ಹಾಗೂ ತಿರುಟೇರ ತಂಡಗಳ ನಡುವಿನ ಪಂದ್ಯದಲ್ಲಿ ತೆಕ್ಕಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಪರದಂಡ ಹಾಗೂ ಪೊರ್ಕೊಂಡ ತಂಡಗಳ ನಡುವಿನ ಪಂದ್ಯದಲ್ಲಿ ಪರದಂಡ ತಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ನಾಪಂಡ ತಂಡವು ಮುಕ್ಕಾಟಿರ(ದೊಡ್ಡಪುಲಿಕೋಟು) ತಂಡವನ್ನು ೨-೦ ಗೋಲುಗಳಿಂದ ಮಣಿಸಿತು.
ಮುಕ್ಕಾಟಿರ (ಬೇಲೂರು ಹರಿಹರ) ತಂಡವು ೮-೦ ಅಂತರದಲ್ಲಿ ಚೌರಿರ(ಹೊದವಾಡ) ತಂಡವನ್ನು ಸೋಲಿಸಿತು.
ಪಾಲೆಕಂಡ ಹಾಗೂ ಗುಡ್ಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಗುಡ್ಡಂಡ ತಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಮೇವಡ ತಂಡವು ತೀತಿಮಾಡ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು.
ತಾತಂಡ ತಂಡವು ತೀತರಮಾಡ ತಂಡವನ್ನು ಟೈ ಬ್ರೇಕರ್ನಲ್ಲಿ ೩-೨ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.
ಮಾಳೇಟಿರ (ಕೆದಮುಳ್ಳೂರು) ಹಾಗೂ ಮನೆಯಪಂಡ ನಡುವಿನ ಪಂದ್ಯವು ೨ ತಂಡಗಳೂ ಬಾರದ ಕಾರಣ ರದ್ದಾಯಿತು.
ಕಾಯಪಂಡ ತಂಡವು ಟೈ ಬ್ರೇಕರ್ನಲ್ಲಿ ಕಟ್ಟೆರ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.
ಮಾಪಣಮಾಡ ತಂಡವು ಕಡೇಮಾಡ ತಂಡವನ್ನು ೨-೦ ಅಂತರದಲ್ಲಿ ಮಣಿಸಿತು.
ಮಚ್ಚಮಾಡ ತಂಡವು ಮೂವೆರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು.
ಬುಟ್ಟಿಯಂಡ ತಂಡವು ಪಾಂಡಿರ ತಂಡವನ್ನು ಟೈ ಬ್ರೇಕರ್ನಲ್ಲಿ ೧-೦ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.
ಶಿವಚಾಳಿಯಂಡ ತಂಡವು ಕುಟ್ಟಂಡ(ಮಾದಾಪುರ) ತಂಡದ ವಿರುದ್ಧ ೨-೦ ಅಂತರದಲ್ಲಿ ಗೆಲುವು ಸಾಧಿಸಿತು.
ತೆಕ್ಕಡ ತಂಡವು ಪರದಂಡ ತಂಡವನ್ನು ೧-೦ ಅಂತರದಲ್ಲಿ ಮಣಿಸಿತು.
ಮುಕ್ಕಾಟಿರ(ಬೇಲೂರು ಹರಿಹರ) ತಂಡವು ಮೇವಡ ತಂಡದ ವಿರುದ್ಧ ಟೈ ಬ್ರೇಕರ್ನಲ್ಲಿ ೨-೧ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.
ಪಾಂಡಿರ ತಂಡವು ಮಚ್ಚಮಾಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು.