ವಾಷಿಂಗ್ಟನ್, ಏ. ೨೬: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಶನಿವಾರ ರಾತ್ರಿ ವೈಟ್ ಹೌಸ್ ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದಲ್ಲಿ ಹಠಾತ್ ಶೂಟೌಟ್ ಸದ್ದು ಕೇಳಿಬಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತವಾಗಿ ಅಧಿಕಾರಿಗಳು ಸ್ಥಳಾಂತರಿಸಿದ ಘಟನೆ ನಡೆಯಿತು.

ಅಮೆರಿಕದ ಇತರ ಪ್ರಮುಖ ನಾಯಕರನ್ನು ಕೂಡ ಸ್ಥಳಾಂತರಿಸಲಾಯಿತು. ತಕ್ಷಣಕ್ಕೆ ಯಾವುದೇ ಸಾವುನೋವುಗಳಾದ ವರದಿಯಾಗಿಲ್ಲ, ಒಬ್ಬ ಕಾನೂನು ಜಾರಿಗೆ ಸಂಬAಧಿಸಿದ ಅಧಿಕಾರಿ ಗುಂಡಿನ ದಾಳಿ ನಡೆದಿರುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಮತ್ತು ಇತರ ಅತಿಥಿಗಳು ಕುಳಿತಿದ್ದ ಬಾಲ್‌ರೂಮ್‌ನ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ವಾಷಿಂಗ್ಟನ್ ಹಿಲ್ಟನ್‌ನ ಔತಣಕೂಟಕ್ಕೆ ಸೀಕ್ರೆಟ್ ಸರ್ವಿಸ್ ಹಾಗೂ ಇತರ ಅಧಿಕಾರಿಗಳು ಧಾವಿಸಿದಾಗ, ಬುರಾಟಾ ಸಲಾಡ್ ಸೇವಿಸುತ್ತಿದ್ದ ಅತಿಥಿಗಳು ಶೂಟೌಟ್ ಸದ್ದು ಕೇಳಿಬಂದ ಕೂಡಲೇ ಭೀತಿಯಿಂದ ಮೇಜುಗಳ ಕೆಳಗೆ ಅಡಗಿ ಕುಳಿತರು. ಏಕಾಏಕಿ ದಾರಿ ಬಿಡಿ, ಸರ್ ಎಂದು ಯಾರೋ ಕೂಗಿದರು. ಇತರರು ಅಡಗಿ ಕುಳಿತುಕೊಳ್ಳಿ ಎಂದು ಎಚ್ಚರಿಸಿದರು. ಒಂದು ಮೂಲೆಯಿಂದ ಗಾಡ್ ಬ್ಲೆಸ್ ಅಮೆರಿಕಾ ಎಂಬ ಘೋಷಣೆ ಕೇಳಿಬಂದಿತು, ಈ ವೇಳೆ ಡೊನಾಲ್ಡ್ ಟ್ರಂಪ್೪೪ನೇ ಪುಟಕ್ಕೆ

(ಮೊದಲ ಪುಟದಿಂದ) ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು. ಅವರು ಕ್ಷಣಿಕವಾಗಿ ಜಾರಿಬಿದ್ದು, ಬಳಿಕ ಸೀಕ್ರೆಟ್ ಸರ್ವಿಸ್ ಸಿಬ್ಬಂದಿಯ ಸಹಾಯದಿಂದ ಎದ್ದರು.

ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೊಟೇಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಶೂಟರ್‌ನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ನ ೩೧ ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ.

ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಸೇರಿದಂತೆ ಡೊನಾಲ್ಡ್ ಟ್ರಂಪ್ ಆಡಳಿತದ ಅನೇಕ ನಾಯಕರು ಭಾಗವಹಿಸಿದ್ದರು.

ಜನಸ್ತೋಮದಲ್ಲಿದ್ದ ಕೆಲವರು ಐದರಿಂದ ಎಂಟು ಗುಂಡಿನ ಸದ್ದುಗಳನ್ನು ಕೇಳಿದಂತೆ ವರದಿ ಮಾಡಿದರು. ನೂರಾರು ಗಣ್ಯ ಪತ್ರಕರ್ತರು, ಪ್ರಸಿದ್ಧ ವ್ಯಕ್ತಿಗಳು ಮತ್ತು ರಾಷ್ಟಿçÃಯ ನಾಯಕರು ಟ್ರಂಪ್ ಭಾಷಣಕ್ಕಾಗಿ ಕಾಯುತ್ತಿದ್ದ ಔತಣಕೂಟ ಸ್ಥಳವನ್ನು ತಕ್ಷಣ ತೆರವುಗೊಳಿಸಲಾಯಿತು.