ಕುಶಾಲನಗರ, ಏ. ೨೬: ಕುಶಾಲನಗರ ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ವಾಸವಿ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಂತರ ಪೂಜಾ ವಿಧಿ ವಿಧಾನಗಳು ನಡೆದವು. ದೇವಾಲಯದ ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾವೇರಿ ನದಿಯಿಂದ ಪೂಜೆ ಸಲ್ಲಿಸಿ ಗಂಗಾಜಲವನ್ನು ಕಳಶಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. ಸಂಜೆ ಕುಶಾಲನಗರದ ಮುಖ್ಯ ಬೀದಿಗಳಲ್ಲಿ ವಾಸವಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಿತು. ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ಕಾರ್ಯದರ್ಶಿ ಕೆ ಪ್ರವೀಣ್ ಖಜಾಂಚಿ ಬಿ ಎಸ್ ಪ್ರಶಾಂತ್ ಉಪಾಧ್ಯಕ್ಷರಾದ ಬಿ ಎಲ್ ಅಶೋಕ್ ಕುಮಾರ್ ನಿರ್ದೇಶಕರಾದ ಬಿ ಆರ್ ನಟರಾಜ್ ಕೆ ಜೆ ಸತೀಶ್ ಮತ್ತು ವಾಸವಿ ಯುವಕ ಸಂಘ ವಾಸವಿ ಯುವತಿಯರ ಸಂಘದ ಪದಾಧಿಕಾರಿಗಳು ಇದ್ದರು.