ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ'ಯಲ್ಲಿ ಪುರುಷರ ಪ್ರೀ-ಕ್ವಾರ್ಟರ್ ಹಾಗೂ ಮಹಿಳೆಯರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು.

ಲಾಲು ಮುದ್ದಯ್ಯ ಮೈದಾನದಲ್ಲಿ ಮಾಳೇಟಿರ (ಕೆದಮುಳ್ಳೂರು) ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ೩೮ ರನ್‌ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೯೭ ರನ್ ಗಳಿಸಿತು. ಕರಿನೆರವಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ಸೋಲು ಕಂಡಿತು.

ಮಾಳೇಟಿರ ಪರ ನವೀನ್ ಹಾಗೂ ಅನ್ಶುಲ್ ತಲಾ ೨ ವಿಕೆಟ್ ಪಡೆದರು. ರಾಣೆ ೫೦ ರನ್ ಗಳಿಸಿದರು. ಕರಿನೆರವಂಡ ಪರ ೨ ವಿಕೆಟ್ ಪಡೆದು ೧೪ ರನ್‌ಗಳನ್ನು ಸೇರಿಸಿದ ಗಗನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಳಮೇಂಗಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡಕ್ಕೆ ೧೦ ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುದಿಯೊಕ್ಕಡ ೬ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೯ ರನ್ ಗಳಿಸಿತು. ಅಳಮೇಂಗಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೩.೧ ಓವರ್‌ಗಳಲ್ಲಿ ೪೨ ರನ್ ಗಳಿಸಿ ಗೆಲುವು ದಾಖಲಿಸಿತು.

ಅಳಮೇಂಗಡ ಸೋಮಯ್ಯ ೨೬ ರನ್ ಗಳಿಸಿದರು. ಪುದಿಯೊಕ್ಕಡ ನಿರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಾರುವಂಡ ಮತ್ತು ಮುಕ್ಕಾಟಿರ (ಬೆಳ್ಳೂರು - ಹರಿಹರ) ನಡುವಿನ ಪಂದ್ಯದಲ್ಲಿ ಪಾರುವಂಡ ತಂಡ ೭ ವಿಕೆಟ್‌ಗಳ ಗೆಲುವು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿತು. ಪಾರುವಂಡ ೫.೩ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೮೮ ರನ್ ಗಳಿಸಿ ಜಯ ಸಾಧಿಸಿತು.

ಪಾರುವಂಡ ಪರ ಪ್ರಿನ್ಸ್ ಹಾಗೂ ಹೇಮಂತ್ ತಲಾ ೨ ವಿಕೆಟ್ ಪಡೆದರು. ಮಿಥುನ್ ೩೫ ರನ್ ಗಳಿಸಿದರು. ಮುಕ್ಕಾಟಿರ ಪರ ಲಕ್ಷö್ಯನ್ ೨ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನೆರವಂಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ ನೆರವಂಡ ತಂಡಕ್ಕೆ ೧೮ ರನ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ ೬ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿತು. ಕೊಟ್ಟಂಗಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ನೆರವAಡ ಪರ ಸಂಪನ್ ೧೮ ರನ್ ಗಳಿಸಿದರು. ಅರುಣ್, ವರುಣ್ ಹಾಗೂ ಬೋಪಣ್ಣ ತಲಾ ೧ ವಿಕೆಟ್ ಕಬಳಿಸಿದರು.

ಕೊಟ್ಟಂಗಡ ಪರ ೨ ವಿಕೆಟ್ ಪಡೆದ ರೋಷನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಸುಮಂತ್ ೧೫ ರನ್ ಗಳಿಸಿದರು.

ಮಹಿಳೆಯರ ಕ್ವಾರ್ಟರ್ ಫೈನಲ್ಸ್ನಲ್ಲಿ ಆದೇಂಗಡ ಮತ್ತು ಮಣವಟ್ಟಿರ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡ ೩೫ ರನ್‌ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಣವಟ್ಟಿರ ೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿತು. ಆದೇಂಗಡ ೫ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೨೧ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮಣವಟ್ಟಿರ ಪರ ಶ್ರುತಿ ೨ ವಿಕೆಟ್ ಪಡೆದರು, ಅರ್ಪಿತಾ ೨೨ ರನ್ ಗಳಿಸಿದರು. ಆದೇಂಗಡ ಪರ ಶೋಭಾ ೧ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅರಮಣಮಾಡ ಮತ್ತು ಕಾಣತಂಡ ಪಂದ್ಯದಲ್ಲಿ ವಾಕ್ ಓವರ್‌ನಿಂದ ಅರಮಣಮಾಡÀ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು.