ಮಡಿಕೇರಿ, ಏ. ೨೬: ನಿರ್ಗತಿಕರು, ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ನಿಂದ ತುರ್ತು ಆರೋಗ್ಯ ಸೇವಾ ಘಟಕವನ್ನು ರಚಿಸಲಾಗಿದೆ.

ಅಧ್ಯಕ್ಷರಾಗಿ ರಾಜು ಬಾಯ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎನ್.ಚರಣ್ ಉಪಾಧ್ಯಕ್ಷರಾಗಿ ಷರೀಫ್ ಎಂ.ಯು ಹಾಗೂ ಕಾರ್ಯದರ್ಶಿಯಾಗಿ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಮಾತನಾಡಿದ ವಿಕಾಸ್ ಜನತಾ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ತುರ್ತು ಆರೋಗ್ಯ ಸೇವಾ ಘಟಕದ ಮೂಲಕ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಅನಾರೋಗ್ಯ ಪೀಡಿತರು ಹಾಗೂ ಅಸಹಾಯಕರ ಸಮಸ್ಯೆಗಳಿಗೆ ತುರ್ತು ಸ್ಪಂದನ ನೀಡಿ ಚಿಕಿತ್ಸೆಯನ್ನು ಒದಗಿಸಲು ಸಹಕಾರ ನೀಡಲಾಗುವುದು. ಅಲ್ಲದೆ ಆರೋಗ್ಯ ಸಂಬAಧಿತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಲಾಗುವುದು ಮತ್ತು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದರು.