ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಸಾಹಸಮಯ ಸ್ಪರ್ಧೆಯೂ ಆಗಿರುವ ಐದನೇ ವರ್ಷದ ಕೇರ್ ಬಲಿ ನಮ್ಮೆ (ಹಗ್ಗಜಗ್ಗಾಟ) ಸ್ಪರ್ಧೆಗೆ ಸಂಭ್ರಮದ ತೆರೆ ಬಿದ್ದಿತು. ನಾಪೋಕ್ಲುವಿನ ಕೆ.ಪಿ.ಎಸ್ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿದ್ದ ಈ ಬಾರಿಯ ಚೀಯಕಪೂವಂಡ ಕಪ್ ಕೇರ್ ಬಲಿ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ ಮುಕ್ಕಾಟಿರ ಹರಿಹರ ಕುಟುಂಬ, ಮಹಿಳಾ ವಿಭಾಗದಲ್ಲಿ ಕಾಂಡAಡ ಕುಟುಂಬ ಹಾಗೂ ೧೬ ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಅಜ್ಜಮಾಡ ಕುಟುಂಬ ಚಾಂಪಿಯನ್ ಆಗಿ ಹೊರಹೊಮ್ಮಿತು. ಪುರುಷರ ವಿಭಾಗದಲ್ಲಿ ಚೀಯಕಪೂವಂಡ, ಮಹಿಳಾ ವಿಭಾಗದಲ್ಲಿ ಪುದಿಯೊಕ್ಕಡ ಹಾಗೂ ಮಕ್ಕಳ ವಿಭಾಗದಲ್ಲಿ ಮುಕ್ಕಾಟಿರ ದೊಡ್ಡಪುಲಿಕೋಟು ಕುಟುಂಬ ರನ್ನರ್ಸ್ ಪ್ರಶಸ್ತಿ ಗಳಿಸಿತು.ಕೊಡವ ಟಗ್ ಆಫ್ ವಾರ್ ಅಕಾಡೆಮಿ ಹಾಗೂ ಚೀಯಕಪೂವಂಡ ಕುಟುಂಬದ ಸಹಯೋಗದಲ್ಲಿ ನಡೆದ ಚೀಯಕಪೂವಂಡ ಕಪ್ ಕೇರ್ ಬಲಿ ನಮ್ಮೆ ಅಭೂತ ಪೂರ್ವ ಯಶಸ್ಸು ಕಂಡಿತು. ಅಂತಿಮ ದಿನವಾದ ಇಂದು ಸ್ಪರ್ಧೆಯ ವಿವಿಧ ಹಂತಗಳನ್ನು ದಾಟಿ ಈ ಕುಟುಂಬಗಳು ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿದ್ದವು. ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ರೋಚಕ ಸ್ಪರ್ಧೆಗಳು ಗಮನ ಸೆಳೆದವು. ಕೌಟುಂಬಿಕ ಹಾಕಿ ಉತ್ಸವಕ್ಕೆ ಹಗ್ಗಜಗ್ಗಾಟ ಅಂಗವಾಗಿ ರಜೆ ನೀಡಲಾಗಿದ್ದ ಹಿನ್ನೆಲೆ ಕ್ರೀಡಾಭಿಮಾನಿಗಳು ಇಂದು ಕೆಪಿಎಸ್ ಮೈದಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಲ್ಲಾ ವಿಭಾಗದ ಫೈನಲ್ ರೋಮಾಂಚಕಾರಿಯಾಗಿ ಜರುಗಿತು.
ಚೀಯಕಪೂವಂಡ ಮತ್ತು ಮುಕ್ಕಾಟ್ಟಿರ (ಹರಿಹರ ) ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಅತಿಥೇಯ ಚೀಯಕಪೂವಂಡ ತಂಡವನ್ನು ಮುಕ್ಕಾಟ್ಟಿರ ತಂಡವು ಸೋಲಿಸುವುದರ ಮೂಲಕ ವಿಜಯ ಪಥಾಕೆ ಹಾರಿಸಿತು. ಕಾಂಡAಡ ಮತ್ತು ಪುದಿಯೋಕ್ಕಡ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಕಾಂಡAಡ ತಂಡವು ಪುದಿಯೋಕ್ಕಡ ತಂಡವನ್ನು ಮಣಿಸುವುದರ ಮೂಲಕ ಕೊಡವ ಕೇರ್ ಬಲಿ ನಮ್ಮಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕ್ರೀಡೆ ಕೊಡವ ಸಂಸ್ಕೃತಿಯ ಒಂದು ಭಾಗ -ಪೊನ್ನಣ್ಣ
ಕ್ರೀಡೆ ಕೊಡವರ, ಕೊಡಗಿನವರ ಅವಿಬಾಜ್ಯ ಅಂಗ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಗೆ ಇದೆ. ಇದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಗತಿ ಕಾಣಬೇಕು ಎಂದು ಅತಿಥಿಗಳಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಚೀಯಕಪೂವಂಡ ಕುಟುಂಸ್ಥರು ಈ ಕೇರ್ ಬಲಿ ನಮ್ಮಯನ್ನು ಹಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಆಯೋಜಿಸಿರುವುದು ಸಂತಸ ತಂದಿದೆ ಎಂದ ಅವರು ನನ್ನ ತಾಯಿಯ ತವರು ಮನೆ ೪೪ನೇ ಪುಟಕ್ಕೆ
(ಮೊದಲ ಪುಟದಿಂದ) ಚೀಯಕಪೂವಂಡ ಆಗಿದೆ. ೧೯೬೩ ರಿಂದ ೨೦೧೯ ರ ವರೆಗೆ ಕೊಡಗಿನ ಕೋವಿ ಹಕ್ಕಿನ ಬಗ್ಗೆ ಸತತ ಹೋರಾಟ ನಡೆಸಿದಂತ ಚೀಯಕಪೂವಂಡ ಭೀಮಯ್ಯ ನನ್ನ ಅಜ್ಜ ಎಂಬುದು ನನಗೆ ಹೆಮ್ಮೆ ಎಂದು ನೆನೆಪಿಸಿಕೊಂಡರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಡಂದೆರ ಬಾಂಡ್ ಗಣಪತಿ ಮಾತನಾಡಿ ಇತರ ಕ್ರೀಡೆಗಳು ಕೌಶಲ್ಯದಿಂದ ಕೂಡಿದೆ ಆದರೆ ಹಗ್ಗ ಜಗ್ಗಾಟ ತೋಳುಬಲಕ್ಕೆ ಹೆಸರುವಾಸಿಯಾಗಿದೆ ಬಲಿಷ್ಠರು ಇದರಲ್ಲಿ ಯಶಸ್ಸು ಕಾಣುತ್ತಾರೆ ಎಂದರು.
ರಾಷ್ಟೀಯ ಮಹಿಳಾ ಕೌನ್ಸಿಲ್ ನಾ ಮುಖ್ಯಸ್ಥ ಶರತ್ ಪರಕೋತ್ ಮಾತನಾಡಿ ಹಗ್ಗ ಜಗ್ಗಾಟ ಸರಳ ಕ್ರೀಡೆ ಅದು ಒಬ್ಬರ ಬಲಕ್ಕಿಂತಲೂ ಏಕತೆಯನ್ನು ಸೂಚಿಸುತ್ತದೆ. ಒಂದು ತಂಡದಿAದ ಏನಾದರು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಡ ಮನು ಸೋಮಯ್ಯ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ ಚೀಯಕಪೂವಂಡ ಕೇರ್ ಬಲಿ ಸಮೀತಿ ಅಧ್ಯಕ್ಷ ಸಿ. ಕೆ ಬೋಪಣ್ಣ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಟಗ್ ಅಪ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ,ಚೀಯಕಪೂವಂಡ ಕುಟುಂಬದಿAದ ಆಯೋಜಿಸಿದ ಕೇರ್ ಬಲಿ ನಮ್ಮಯಲ್ಲಿ ೧೮೯ ಪುರುಷರ ತಂಡ ೮೫ ಮಹಿಳಾ ತಂಡ ೨೨ ಮಕ್ಕಳ ತಂಡ ಸೇರಿ ಒಟ್ಟು ೨೯೬ ಪಾಲ್ಗೊಳ್ಳುವುದರ ಮೂಲಕ ಇದು ಭಾರತೀಯ ಬುಕ್ ಆ ಫ್ ರೆಕಾರ್ಡ್ ಗೆ ದಾಖಲಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಇಲಾಖಾ ಮುಖ್ಯಸ್ಥ ತೀತೀರ ರೋಷನ್ ಅಪ್ಪಚ್ಚು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ,ಭಾರತೀಯ ಬುಕ್ ಆಫ್ ರೆಕಾರ್ಡ್ ನ ಅಧಿಕಾರಿ ಸಮೀಮ್ ರಜಾಕ್ ಚೀಯಕಪೂವಂಡ ಕುಟುಂಬದ ಪಟ್ಟೆದಾರ ಸಿ. ಎ.ಚಿಟ್ಟಿಯಪ್ಪ,ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ, ಸೇರಿದಂತೆ ಕುಟುಂಬದ ಎಲ್ಲಾ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು.
ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಬಾಳೆಯಡ ದಿವ್ಯ ಮಂದಪ್ಪ,ಕೊಟ್ಟAಗಡ ರಾಜಾ ಸುಬ್ಬಯ್ಯ ಕಾರ್ಯನಿರ್ವಹಿಸಿದರು. ಚೀಯಕಪೂವಂಡ ಯಶಸ್ವಿನಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಚೀಯಕಪೂವಂಡ ಕೇರ್ ಬಲಿ ನಮ್ಮೆಯ ಬಗ್ಗೆ ಸಾಹಿತ್ಯ ರಚಿಸಿ ಸಂಗೀತ ನೀಡಿದ ಮುಕ್ಕಾಟ್ಟಿರ ಮೌನಿ ನಾಣಯ್ಯ, ಉಳುವಂಗಡ ರೋಹಿತ್ ಭೀಮಯ್ಯ, ಗಾಯಕಿ ಶಾಂತೆಯAಡ ಯಾನ ಮಚ್ಚಾಯ್ಯ ಅವರನ್ನು ಶಾಸಕರಾದ ಎ. ಎಸ್ ಪೊನ್ನಣ್ಣ ಸನ್ಮಾನಿಸಿದರು.