ಮಡಿಕೇರಿ, ಏ. ೨೬: ಮರಗೋಡಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಗೌಡ ಕುಟುಂಬ ಕಲರವ - ೨೦೨೬ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಪರ್ಲಕೋಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಉಳುವಾರು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಗೌಡ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟದಲ್ಲಿ ಉಳುವಾರು ಪ್ರಥಮ, ಕುದುಪಜೆ ದ್ವಿತೀಯ ಸ್ಥಾನ ಗಳಿಸಿದೆ.
ಕ್ರಿಕೆಟ್ ಮೊದಲ ಸೆಮಿಫೈನಲ್ ಪಂದ್ಯಾಟ ಉಳುವಾರು ಹಾಗೂ ಕುಡೆಕಲ್ ತಂಡಗಳ ನಡುವೆ ನಡೆಯಿತು. ೧೦ ಓವರ್ನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುಡೆಕಲ್ ತಂಡ ೪೨ ರನ್ಗಳಿಸಿ ಆಲೌಟ್ ಆಯಿತು. ಉಳುವಾರು ತಂಡ ೪.೧ ಓವರ್ಗೆ ೪೩ ರನ್ ಗಳಿಸಿ ೪ ವಿಕೆಟ್ಗಳ ಜಯ ಸಾಧಿಸಿತು.
ಎರಡನೇ ಸೆಮಿಫೈನಲ್ ಪಂದ್ಯಾಟ ಪರ್ಲಕೋಟಿ ಹಾಗೂ ಸಣ್ಣಜನ ತಂಡಗಳ ನಡುವೆ ನಡೆಯಿತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ೧೦ ಓವರ್ಗೆ ೭ ವಿಕೆಟ್ಗೆ ೮೪ ರನ್ ಗಳಿಸಿತು. ಸಣ್ಣಜನ ೭ ವಿಕೆಟ್ಗೆ ೬೭ ರನ್ಗಳಿಸಿ ಸೋಲನುಭವಿಸಿತು.
ಫೈನಲ್ ಪಂದ್ಯಾಟ ಪರ್ಲಕೋಟಿ ಹಾಗೂ ಉಳುವಾರು ತಂಡಗಳ ನಡುವೆ ನಡೆಯಿತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ೧೦ ಓವರ್ಗೆ ೮ ವಿಕೆಟ್ಗೆ ೬೭ ರನ್ ಗಳಿಸಿತು. ಉಳುವಾರು ೯.೩ ಓವರ್ಗಳಲ್ಲಿ ೪೩ ರನ್ಗೆ ಆಲೌಟ್ ಆಯಿತು.
ಕ್ರಿಕೆಟ್ನಲ್ಲಿ ಮೊದಲ ಸ್ಥಾನ ಪಡೆದ ಪರ್ಲಕೋಟಿ ತಂಡಕ್ಕೆ ರೂ. ೫೦ ಸಾವಿರ ನಗದು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಉಳುವಾರು ತಂಡಕ್ಕೆ ರೂ. ೩೦ ಸಾವಿರ ನಗದು, ಟ್ರೋಫಿ, ಸೆಮಿಫೈನಲ್ನಲ್ಲಿ ನಿರ್ಗಮಿತ ತಂಡಗಳಿಗೆ ತಲಾ ರೂ. ೧೫ ಸಾವಿರ ನಗದು ಟ್ರೋಫಿ, ಕ್ವಾರ್ಟರ್ ಫೈನಲ್ನಲ್ಲಿ ನಿರ್ಗಮಿತ ತಂಡಗಳಿಗೆ ತಲಾ ೫ ಸಾವಿರ ೪೫ನೇ ಪುಟಕ್ಕೆ
(ಮೊದಲ ಪುಟದಿಂದ) ನಗದು ಟ್ರೋಫಿ ನೀಡಲಾಯಿತು. ಹಗ್ಗಜಗ್ಗಾಟದಲ್ಲಿ ಮೊದಲ ಸ್ಥಾನ ಪಡೆದ ಉಳುವಾರು ತಂಡಕ್ಕೆ ರೂ. ೨೫ ಸಾವಿರ ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕುದುಪಜೆ ತಂಡಕ್ಕೆ ರೂ. ೧೫ ಸಾವಿರ ನಗದು ಟ್ರೋಫಿ ವಿತರಿಸಲಾಯಿತು.
ವೈಯಕ್ತಿಕ ಬಹುಮಾನಗಳು
ಬೆಸ್ಟ್ ಬ್ಯಾಟ್ಸ್ಮನ್ - ಕೀರ್ತಿ (ಕುಡೆಕಲ್), ಬೆಸ್ಟ್ ಬೌಲರ್ ಮಂಜ (ಕುಡೆಕಲ್), ಬೆಸ್ಟ್ ಫೀಲ್ಡರ್ ಪ್ರಫುಲ್ (ಉಳುವಾರು), ಸರಣಿ ಪುರುಷೋತ್ತಮ ಸಜನ್ (ಪರ್ಲಕೋಟಿ), ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ರಕ್ಷಿತ್ (ಪರ್ಲಕೋಟಿ), ಉದಯೋನ್ಮುಖ ಆಟಗಾರ ವಿಕ್ರಾಂತ್ (ಕುದುಪಜೆ), ಬೆಸ್ಟ್ ವುಮೆನ್ ಪ್ಲೇಯರ್ ಜ್ಯೋತಿ (ಬಿದ್ರುಪಣೆ).
ಗೌಡ ಇವನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಉದ್ಯಮಿ ಹರೀಶ್ ಗೌಡ ಕಂಬಳ, ಕಾಫಿ ಬೆಳೆಗಾರ ಕರ್ಣಯ್ಯನ ಬಸಪ್ಪ ಪಾಲ್ಗೊಂಡಿದ್ದರು. ಮಡಿಕೇರಿ ಶಾಸಕ ಡಾ. ಮಂತರ್ಗೌಡ, ಉದ್ಯಮಿ ಎಡಿಕೇರಿ ಪ್ರಸನ್ನ ಪಂದ್ಯಾಟದ ವೇಳೆ ಭೇಟಿ ನೀಡಿದ್ದರು.
ಮೊದಲ ಸೆಮಿಫೈನಲ್ ಪಂದ್ಯವನ್ನು ಕಾಫಿ ಬೆಳೆಗಾರರಾದ ಬಡುವಂಡ್ರ ಲಕ್ಷಿö್ಮÃಪತಿ, ಎರಡನೇ ಸೆಮಿಫೈನಲ್ ಪಂದ್ಯವನ್ನು ಭಾರತೀಯ ಗ್ಲೋಬಲ್ ಅಕಾಡೆಮಿ ಆಫ್ ಎಜುಕೇಶನ್ ಉಪಾಧ್ಯಕ್ಷ ಬಿದ್ರುಪಣೆ ಬಸಪ್ಪ ಉದ್ಘಾಟಿಸಿದರು. ಅಂತಿಮ ಪಂದ್ಯವನ್ನು ಅತಿಥಿ ಗಣ್ಯರು ಸೇರಿ ಉದ್ಘಾಟಿಸಿದರು. ಪಂದ್ಯಾಟದ ಆಯೋಜಕರು ಹಾಜರಿದ್ದರು.
ಆರೋಗ್ಯ ತಪಾಸಣಾ ಶಿಬಿರ
ಭಾರತೀಯ ಗ್ಲೋಬಲ್ ಅಕಾಡೆಮಿ ಆಫ್ ಎಜುಕೇಶನ್, ಕೊಡಗು ಗೌಡ ಸಮಾಜ, ಕೆವಿಜಿ ಮೆಡಿಕಲ್ ಕಾಲೇಜು ಸುಳ್ಯ, ರೋಟರಿ ಮಿಸ್ಟಿಹಿಲ್ಸ್ ಮಡಿಕೇರಿ, ಗೌಡ ಇವಿನಿಂಗ್ ಸ್ಟಾರ್ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಉದ್ಘಾಟನೆಯನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷ ಡಿ.ಎಸ್. ಆನಂದ ನೆರವೇರಿಸಿದರು.
ಭಾರತೀಯ ಗ್ಲೋಬಲ್ ಅಕಾಡೆಮಿ ಆಫ್ ಎಜುಕೇಶನ್ ಅಧ್ಯಕ್ಷ ಮಳ್ಳಂದಿರ ಕೃಷ್ಣರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎA. ರುದ್ರಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ಗೌಡ ಇವಿನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್, ಮರಗೋಡು ಗೌಡ ಸಮಾಜದ ಅಧ್ಯಕ್ಷ ಕಟ್ಟೆಮನೆ ಜನಾರ್ಧನ, ಭಾರತಿ ಗ್ಲೋಬಲ್ ಅಕಾಡೆಮಿ ಆಫ್ ಎಜುಕೇಷನ್ ಉಪಾಧ್ಯಕ್ಷ ಬಿದ್ರುಪಣೆ ಬಸಪ್ಪ ಪಾಲ್ಗೊಂಡಿದ್ದರು.