ಮಡಿಕೇರಿ, ಏ. ೨೬: ಶಿಕ್ಷಕಿಯೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೇರಂಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅಲ್ಲಿನ ಬೇಂಗೂರು ನಿವಾಸಿ ಅಂಜಪAಡ ಕರುಂಬಯ್ಯ ಅವರ ಪತ್ನಿ ರೋಹಿಣಿ (೫೧) ಇಂದು ಬೆಳಿಗ್ಗೆ ೫ ಗಂಟೆ ವೇಳೆಯಲ್ಲಿ ತಮ್ಮ ಮನೆಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಸ್ತುತದ ಸೆನ್ಸಸ್ ಕಾರ್ಯಕ್ಕೂ ನಿಯೋಜಿತರಾಗಿದ್ದ ಇವರು ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ ಒತ್ತಡದಲ್ಲಿದ್ದರು ಎನ್ನಲಾಗಿದೆ. ಮನೆಯಲ್ಲಿ ಪತಿ ಹಾಗೂ ಪುತ್ರಿ ಇದ್ದು, ಅವರಿಗೆ ಅರಿವಾಗದಂತೆ ಅವರು ಈ ಕೃತ್ಯವೆಸಗಿಕೊಂಡಿದ್ದಾರೆ. ಸಮಸ್ಯೆಗಳ ಬಗ್ಗೆ ಪುತ್ರಿಗೆ ಮೊಬೈಲ್ ಸಂದೇಶ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಾಗಿದೆ.