ಚೇನಂಡ ಕಪ್ನಿಂದ ಮಾಜಿ ಚಾಂಪಿಯನ್ ಕೂತಂಡ ನಿರ್ಗಮಿಸಿದೆ. ಆದರೂ ಕೂತಂಡ ತಂಡದಲ್ಲಿ ಹಲವು ವಿಶೇಷ ಸಾಧನೆಗಳಿವೆ. ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರೂ ಆಗಿರುವ ಕೂತಂಡ ಸುರೇಶ್ ಅಪ್ಪಯ್ಯ ಅವರು ಕೌಟುಂಬಿಕ ಹಾಕಿ ಇತಿಹಾಸದಲ್ಲಿ ವಿಶೇಷ ಸಾಧಕ ವ್ಯಕ್ತಿ. ೧೯೯೭ರ ಪಾಂಡAಡ ಕಪ್ನಿಂದ ಈ ತನಕ ಚೇನಂಡ ಕಪ್ನ ತನಕ ಸತತ ೨೬ ವರ್ಷಗಳ ಉತ್ಸವದಲ್ಲೂ ಇವರು ಆಟವಾಡಿದವರು. ಇದು ಮಾತ್ರವಲ್ಲ ೨೬ ವರ್ಷಗಳಲ್ಲಿ ತಂಡ ಆಡಿದ ಎಲ್ಲಾ ಪಂದ್ಯಗಳಲ್ಲೂ ಒಂದೇ ಒಂದು ಪಂದ್ಯವೂ ಬಿಡದಂತೆ ಸರಿಸುಮಾರು ೧೨೦ ರಷ್ಟು ಪಂದ್ಯಗಳಲ್ಲಿ ಇವರು ಆಟವಾಡಿದ್ದಾರೆ. ಪ್ರಸ್ತುತ ೬೩ ವರ್ಷ ವಯೋಮಿತಿಯವರಾದ ಇವರು ಹಲವಾರು ಗೋಲುಗಳನ್ನೂ ದಾಖಲಿಸಿದ್ದು, ಇದೀಗ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರೂ ಆಗಿದ್ದಾರೆ.
ಕೂತಂಡ ಕುಟುಂಬ ೭ ಫೈನಲ್ಸ್ (೪ ಪ್ರಶಸ್ತಿ) ೩ ರನ್ನರ್ಸ್ ಪ್ರಶಸ್ತಿ ಜತೆಗೆ ಬಹುತೇಕ ಉತ್ಸವಗಳಲ್ಲಿ ಪ್ರಿ ಕ್ವಾರ್ಟರ್, ಕ್ವಾರ್ಟರ್, ಸೆಮಿಫೈನಲ್ ತಲುಪಿರುವ ತಂಡವಾಗಿದೆ.