ಮಡಿಕೇರಿ, ಏ. ೨೫: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಚೇನಂಡ ಕಪ್ ಹಾಕಿಯಲ್ಲಿಂದು ಹಲವು ತಂಡಗಳು ಮುನ್ನಡೆ ಸಾಧಿಸಿದ್ದು, ಮಹಿಳಾ ಹಾಕಿ ಕೂಡ ಇಂದು ಶುಭಾರಂಭಗೊAಡಿದೆ.
೧೧ ಸೈಡ್ ಹಾಕಿಯಲ್ಲಿ ಪಾಡೆಯಂಡ ಹಾಗೂ ಚೇಂದAಡ ನಡುವಿನ ಪಂದ್ಯದಲ್ಲಿ ಪಾಡೆಯಂಡ ೭-೮ ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಜಯ ಗಳಿಸಿತು. ಯಾವುದೇ ಗೋಲು ಗಳಿಸದ ಹಿನ್ನೆಲೆ ಟೈಬ್ರೇಕರ್ ಮೊರೆ ಹೋಗಲಾಯಿತು. ಇದರಲ್ಲಿ ಪಡೆಯಂಡ ಹೆಚ್ಚಿನ ಗೋಲು ದಾಖಲಿಸಿ ಗೆಲುವು ಪಡೆಯಿತು. ಚೆಪ್ಪುಡಿರ ಹಾಗೂ ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳಿಂದ ಚೆಪ್ಪುಡಿರ ವಿಜಯಶಾಲಿಯಾಯಿತು.
ನೆಲ್ಲಮಕ್ಕಡ ವಿರುದ್ಧ ಕೊಲ್ಲೀರ ೦-೪ ಗೋಲುಗಳ ಅಂತರದಲ್ಲಿ ಪರಾಭವಗೊಂಡಿತು. ಪರದಂಡ ಹಾಗೂ ಮೇಕೇರಿರ ನಡುವಿನ ಹಣಾಹಣಿಯಲ್ಲಿ ಪರದಂಡ ಗೆಲುವು ಪಡೆಯಿತು. ಪಂದ್ಯದ ಅವಧಿಯಲ್ಲಿ ೧-೧ ಸಮಬಲ ಸಾಧಿಸಿದ ಹಿನ್ನೆಲೆ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್ ಮೊರೆ ಹೋಗಲಾಯಿತು. ಈ ಸಂದರ್ಭ ೩-೦ ಗೋಲುಗಳಿಂದ ಪರದಂಡ ಜಯಗಳಿಸಿತು.
ಮಚ್ಚಾರಂಡ ತಂಡವನ್ನು ಇಟ್ಟಿರ ಮಣಿಸಿತು. ಪಂದ್ಯದ ಅವಧಿಯಲ್ಲಿ ೧-೧ ಗೋಲುಗಳಿಂದ ಪಂದ್ಯ ಡ್ರಾ ಆಗಿತ್ತು. ಟೈಬ್ರೇಕರ್‌ನಲ್ಲಿ ಇಟ್ಟಿರ ೪-೨ ಗೋಲುಗಳಿಂದ ಮಚ್ಚಾರಂಡವನ್ನು ಸೋಲಿಸಿತು. ಕಂಬೀರAಡ ವಿರುದ್ಧ ಕುಪ್ಪಂಡ (ಕೈಕೇರಿ) ೭-೫ ಗೋಲುಗಳ ಜಯ ಸಾಧಿಸಿತು. ಪಂದ್ಯದ ಅವಧಿಯಲ್ಲಿ ೨-೨ ಸಮಬಲವನ್ನು ಉಭಯ ತಂಡಗಳು ಸಾಧಿಸಿದ್ದವು. ಟೈಬ್ರೇಕರ್‌ನಲ್ಲಿ ಕುಪ್ಪಂಡ ೫, ಕಂಬೀರAಡ ೩ ಗೋಲು ದಾಖಲಿಸಿತು. ಮುಕ್ಕಾಟಿರ (ಹರಿಹರ) ವಿರುದ್ಧ ಅರಮಣಮಾಡ ೧-೦ ಗೋಲುಗಳಿಂದ ಗೆಲುವು ತನ್ನದಾಗಿಸಿಕೊಂಡಿತು.
ಕೋಳೆರ ಹಾಗೂ ಸೋಮೆಯಂಡ ನಡುವಿನ ಪಂದ್ಯದಲ್ಲಿ ಕೋಳೆರ ೨-೧ ಗೋಲುಗಳಿಂದ ಗೆಲುವು ದಾಖಲಿಸಿತು. ಚೇಂದಿರ ವಿರುದ್ಧ ಮಂಡೇಪAಡ ೪-೨ ಗೋಲುಗಳಿಂದ ಗೆಲುವು ಪಡೆಯಿತು. ಬೊಟ್ಟೋಳಂಡ ವಿರುದ್ಧ ಚೆಪ್ಪುಡಿರ ೫-೦ ಗೋಲುಗಳ ಗೆಲುವು ಪಡೆಯಿತು.
ಕೂತಂಡ ವಿರುದ್ಧ ಪುಲ್ಲೇಂಗಡ ೧-೦ ಗೋಲುಗಳಿಂದ ಜಯ ಪಡೆಯಿತು.
ಮಹಿಳಾ ಹಾಕಿ ವಿಜೇತರು
೫-ಎ ಸೈಡ್ ಮಹಿಳಾ ಹಾಕಿಯ ಮೊದಲ ದಿನದ ರೋಚಕ ಹಣಾಹಣಿ ನೋಡುಗರನ್ನು ರೋಮಾಂಚನಗೊಳಿಸಿತು.
ಕೋಡಿಮಣಿಯಂಡ ಹಾಗೂ ಕೊಂಡೀರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳಿಗೆ ಕೊಂಡೀರ ವಿಜಯ ಸಾಧಿಸಿತು. ಪಡೆಯಂಡ ಹಾಗೂ ಚಾರಿಮಂಡ ನಡುವಿನ ಪಂದ್ಯದಲ್ಲಿ ಪಡೆಯಂಡ ೧-೦ ಗೋಲುಗಳ ಜಯ ದಾಖಲಿಸಿತು. ಚೆಪ್ಪುಡಿರ ಹಾಗೂ ಚೇಂದಿರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳಿಂದ ಚೆಪ್ಪುಡಿರ ಜಯ ಗಳಿಸಿತು. ಚಿಂಡಮಾಡ ವಿರುದ್ಧ ಅಜ್ಜಿನಿಕಂಡ ೩-೦ ಗೋಲುಗಳಿಂದ ಪರಾಜಿತಗೊಂಡಿತು. ಅಚ್ಚಪಂಡ ಗೈರಿನಿಂದ ಕೂತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ನಾಟೋಳಂಡ ತಂಡವನ್ನು ಆದೇಂಗಡ ೪-೦ ಗೋಲುಗಳಿಂದ ಸೋಲಿಸಿತು. ಕುಟ್ಟಂಡ (ಕಾರ್ಮಾಡ್) ವಿರುದ್ಧ ಕನ್ನಂಡ ೧-೦ ಗೋಲುಗಳ ಜಯ ಪಡೆಯಿತು.
ಪೊನ್ನಚೆಟ್ಟಿರ ವಿರುದ್ಧ ಕುಟ್ಟಂಡ (ಕಾರ್ಮಾಡ್) ೨-೧ ಗೋಲುಗಳಿಂದ ಗೆಲುವು ಸಾಧಿಸಿತು. ಕಂಬೀರAಡ ತಂಡವನ್ನು ಕೊಂಡೀರ ೨-೦ ಗೋಲುಗಳಿಂದ ಪರಾಭವಗೊಳಿಸಿತು. ಬೈಜಾರಂಡ ಹಾಗೂ ಪಡೆಯಂಡ ನಡುವಿನ ಪಂದ್ಯದಲ್ಲಿ ಪಡೆಯಂಡ ಗೆಲುವು ಪಡೆಯಿತು. ಚಿಂಡಮಾಡ ತಂಡವನ್ನು ಚೆಪ್ಪುಡಿರ ೪-೦ ಗೋಲುಗಳಿಂದ ಸೋಲಿಸಿತು. ಬೊವ್ವೇರಿಯಂಡ ಗೈರಾದ ಹಿನ್ನೆಲೆ ವಾಕ್‌ಓವರ್ ಮೂಲಕ ಚೆಯ್ಯಂಡ ಗೆಲುವು ಪಡೆಯಿತು. ೩-೨ ಗೋಲುಗಳಿಂದ ಕಾಳೇಂಗಡ ವಿರುದ್ಧ ಚೆಯ್ಯಂಡ ಜಯ ಸಾಧಿಸಿತು. ಬೈಜಾರಂಡ ವಿರುದ್ಧ ಪಾಡೆಯಂಡ ೨-೦ ಗೋಲುಗಳಿಂದ ಜಯಗಳಿಸಿತು. ಮುದ್ದಂಡ ವಿರುದ್ಧ ಬಲ್ಲಚಂಡ ೧-೦ ಗೋಲುಗಳ ಗೆಲುವು ಪಡೆಯಿತು. ಕನ್ನಂಡ ವಿರುದ್ಧ ಆದೇಂಗಡ ಟೈಬ್ರೇಕರ್‌ನಲ್ಲಿ ೧-೦ ಗೋಲುಗಳಿಂದ ಗೆಲುವಿನ ನಗೆಬೀರಿತು.
ಮಂಡೇಪAಡ ವಿರುದ್ಧ ಕಲಿಯಂಡ ಟೈಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು. ಸೋಮೆಯಂಡ ವಾಕ್‌ಓವರ್‌ನಿಂದ ಕುಟ್ಟಂಡ (ಕಾರ್ಮಾಡ್) ಮುಂದಿನ ಸುತ್ತಿಗೆ ಪ್ರವೇಶಿಸಿತು. ೧-೦ ಗೋಲುಗಳಿಂದ ಕೂತಂಡ ವಿರುದ್ಧ ಪೊನ್ನಚೆಟ್ಟಿರ ಜಯಗಳಿಸಿತು.