ಐಗೂರು, ಏ. ೨೫: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯ ಪ್ರದೇಶದ ಕೃಷ್ಣಪ್ಪನ ಗುಂಡಿ ಎಂಬ ಸ್ಥಳದ ಬಳಿ ಆನೆಗಳು ನಾಡಿಗೆ ಲಗ್ಗೆ ಇಡದಂತೆ ಅಳವಡಿಸಲಾಗಿದ್ದ ಕಬ್ಬಿಣದ ರೈಲ್ವೆ ಬ್ಯಾರಿಕೇಡ್ ಬೇಲಿ ಕಳೆದ ಮೂರು ವರ್ಷಗಳ ಹಿಂದೆ ಮರಿದು ಹೋಗಿತ್ತು.
ಈ ಕುರಿತು ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸಜ್ಜಳ್ಳಿಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಕುರಿತು ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಆನೆ ಹೋರಾಟ ಸಮಿತಿಯ ಸದಸ್ಯರು ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಹಾನಿಗೊಳಗಾದ ರೈಲ್ವೆ ಬ್ಯಾರಿಕೇಡ್ ಬೇಲಿಯನ್ನು ತಕ್ಷಣ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೊಸದಾಗಿ ಬ್ಯಾರಿಕೇಡ್ ಬೇಲಿಯನ್ನು ನಿರ್ಮಿಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಬ್ಯಾರಿಕೇಡ್ ದುರಸ್ತಿ ಸಂಬAಧ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಅವರೊಡನೆ ಆನೆ ಹೋರಾಟ ಸಮಿತಿಯ ಮಚ್ಚಂಡ ಅಶೋಕ್, ಬಾರನ ಪ್ರಮೋದ್, ಕೆ.ಪಿ ರಾಯ್, ಎಂ.ಪಿ ಜಯಕುಮಾರ್, ಮಂಜುನಾಥ್ ಮತ್ತು ಕೆ.ಬಿ. ಧೀರಜ್ ಒತ್ತಾಯಿಸಿದ್ದರು.