ವೀರಾಜಪೇಟೆ, ಏ. ೨೫: ನಗರದ ಕಂಚಿ ಕಾಮಾಕ್ಷಮ್ಮ ರಸ್ತೆಯಲ್ಲಿರುವ ಸುಮಾರು ೨೫೦ ವರ್ಷಗಳ ಇತಿಹಾಸವಿರುವ ಶ್ರೀ ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವವು ತಾ. ೨೮ ರಿಂದ ೩೦ ರವರಗೆ ನಡೆಸಲಾಗುತ್ತದೆ.

ತಾ. ೨೮ ರ ಮಂಗಳವಾರ ಪ್ರಾತಃಕಾಲ ೬ ಗಂಟೆಗೆ ಗಣಪತಿ ಹೋಮ, ಸಂಜೆ ೬ ಗಂಟೆಗೆ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಮುಖ್ಯ ಬೀದಿಗಳಲ್ಲಿ ಶ್ರೀ ಕಂಚಿ ಕಾಮಾಕ್ಷಿ ಹಾಗೂ ಮಾರಿಯಮ್ಮ ದೇವರ ಕರಗಗಳ ಮೆರವಣಿಗೆ, ತದನಂತರ, ದೇವಸ್ಥಾನದಲ್ಲಿ ಮಹಾ ಪೂಜೆ ಪ್ರಸಾದ ವಿನಿಯೋಗ, ಹಾಗೂ ಅನ್ನ ಸಂತರ್ಪಣೆ, ತಾ. ೨೯ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಕಂಚಿ ಕಾಮಾಕ್ಷಿ ಅಮ್ಮನವರ ಮಹಾಪೂಜೆ ತದನಂತರ ಅನ್ನಸಂತರ್ಪಣೆ, ರಾತ್ರಿ ೯ ಗಂಟೆಗೆ ಮಾರಿಯಮ್ಮ ದೇವರಿಗೆ ನಂದಾ ದೀಪ ಹಾಗೂ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ತಾ. ೩೦ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಕಂಚಿ ಕಾಮಾಕ್ಷಿ ಅಮ್ಮನವರ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಮತ್ತು ಮಾರಿಯಮ್ಮ ದೇವಿಯ ಕರಗ ವಿಸರ್ಜನೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.