ಮಡಿಕೇರಿ, ಏ. ೨೫: ಕೊಡಗು ಜಿಲ್ಲೆಯ ಎಲ್ಲ ಹೋಂಸ್ಟೇ ಮಾಲೀಕರು ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಬೇಕು. ಹೋಂ ಸ್ಟೇಗಳಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಮಾಲೀಕರೇ ಹೊಣೆಗಾರರು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಎಚ್ಚರಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಜಿಲ್ಲೆಯ ಹೋಂಸ್ಟೇ, ಹೋಟೆಲ್ ಮತ್ತು ಟ್ರಾವೆಲ್ಸ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆದು ಅವರೊಂದಿಗೆ ಹಲವು ವಿಷಯಗಳನ್ನು ಕುರಿತು ಚರ್ಚಿಸಿದರು.ಹೋಂಸ್ಟೇ, ಹೋಟೆಲ್‌ಗಳ ನೋಂದಣಿ, ಪ್ರವಾಸಿಗರ ಸುರಕ್ಷತೆ, ಕಾರ್ಮಿಕರ ಗುಣ ನಡತೆ ಪರಿಶೀಲನೆ, ವಿದೇಶಿ ಪ್ರವಾಸಿಗರ ನೋಂದಣಿ ಮುಂತಾದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.

ವಿದೇಶಿಯರು ಬಂದು ಉಳಿದುಕೊಂಡಾಗ ಸಮೀಪದ ಪೊಲೀಸ್ ಠಾಣೆಯಲ್ಲಿ ‘ಸಿ’ ಫಾರಂ ನೀಡುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಕ್ರಮ ಖಚಿತ ಎಂದರು. ಪ್ರತಿ ಹೋಂಸ್ಟೇಗಳ ಮುಂದೆ ತಮ್ಮ ನೋಂದಣಿ ಸಂಖ್ಯೆ, ಅದರ ಅವಧಿ ಸೇರಿದಂತೆ ಮತ್ತಿತರ ವಿವರಗಳನ್ನು ಹಾಕುವುದು ಕಡ್ಡಾಯ. ಪರವಾನಗಿ ಪಡೆಯದೇ ಇದ್ದರೆ ಅಂತಹವರು ಹೋಂಸ್ಟೇ ನಡೆಸಬಾರದು ಎಂದು ಹೇಳಿದರು. ಎಲ್ಲ ಹೋಂಸ್ಟೇಗಳ ಕುರಿತು ಪರಿಶೀಲನಾ ಕಾರ್ಯ ನಡೆಸಲಾಗುವುದು. ಒಂದು ವೇಳೆ ಅಕ್ರಮ, ಅನಧಿಕೃತ, ನಿಯಮ ಉಲ್ಲಂಘನೆಗಳು ಕಂಡು ಬಂದರೆ ಕ್ರಮ ನಿಶ್ಚಿತ ಎಂದರು. ನಿಯಮಾವಳಿಯಂತೆ ಪ್ರತಿ ಪ್ರವಾಸಿಗರ ದಾಖಲಾತಿಗಳನ್ನು ಸಂಗ್ರಹಿಸಬೇಕು,

ಅವರ ಸಂಪೂರ್ಣ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ವಿವರಗಳನ್ನು ದಾಖಲಿಸಿಕೊಳ್ಳಬೇಕು, ರಿಜಿಸ್ಟಾರ್ ಅನ್ನು ಚಾಚೂತಪ್ಪದೇ ನಿರ್ವಹಿಸಬೇಕು ಎಂದರು.

ಹೋAಸ್ಟೇಗಳ ಸಿಸಿಟಿವಿಗಳು ಚಾಲನೆಯಲ್ಲಿರಬೇಕು, ಕಾರ್ಮಿಕರ ಗುಣ, ನಡತೆಗಳ ಮೇಲೆ ನಿಗಾ ಇರಿಸಬೇಕು, ಕೆಟ್ಟ ಗುಣ, ಕೆಟ್ಟ ನಡತೆ ಇರುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕು, ಅಂತಹವರನ್ನು ಕೆಲಸದಲ್ಲಿ ಇರಿಸಿಕೊಳ್ಳಬಾರದು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಭಾಗವಹಿಸಿದ್ದರು.