ಕೂಡಿಗೆ, ಏ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಜೇನುಕಲ್ಲು ಬೆಟ್ಟ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪೂಜೋತ್ಸದ ಅಂಗವಾಗಿ ಉದ್ಭವ ಶ್ರೀ ಬಸವಣ್ಣ ದೇವರಿಗೆ ವಿಶೇಷ ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ, ಸೇರಿದಂತೆ ಭಕ್ತರಿಗೆ ಅನ್ನಸಂರ್ತಪಣೆ ನಡೆಯಿತು.

ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಎಂ. ನಾಗೇಶ್, ಕಾರ್ಯದರ್ಶಿ ಬಸವರಾಜ್, ಗ್ರಾಮದ ಪ್ರಮುಖರಾದ ಟಿ.ಕೆ. ಚಂದ್ರಶೇಖರ್, ಧರ್ಮಾನಂದ್, ಕುಮಾರ್, ಕೆ.ಆರ್. ಜಗದೀಶ್, ಗಣೇಶ್, ಪುಟ್ಟರಾಜ್, ಜಗದೀಶ್ ಸೇರಿದಂತೆ ಸಮಿತಿ ನಿರ್ದೇಶಕರು ಸದಸ್ಯರು ಗ್ರಾಮಸ್ಥರು ಹಾಜರಿದ್ದರು.