ಸೋಮವಾರಪೇಟೆ, ಏ. ೨೪: ಗರಗಂದೂರು ಬಿ ಗ್ರಾಮದ ಶ್ರೀ ಗುರುಬಸವೇಶ್ವರ ದೇವರ ೧೬ನೇ ವಾರ್ಷಿಕ ಮಹಾಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಈಶ್ವರ ದೇವರು, ಶ್ರೀ ತಾಯಿ ಚೌಡೇಶ್ವರಿ, ಶ್ರೀ ನಾಗ ದೇವರನ್ನು ಆರಾಧಿಸಲಾಯಿತು. ನಂತರ ಶ್ರೀ ಬಸವೇಶ್ವರ ದೇವಳದಲ್ಲಿ ಗಣಪತಿ ಹೋಮ, ಶ್ರೀ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರಗಳು, ರಾಜೋಪಚಾರ ನಡೆಯಿತು.

ಅರ್ಚಕರಾದ ಬಿ.ಈ. ಮಂಜುನಾಥ್, ಮೋಹನ ಮೂರ್ತಿಯವರ ಪೂಜಾ ಸಂಕಲ್ಪದೊAದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ರೋಹಿತ್ ಮತ್ತು ಸದಸ್ಯರುಗಳು, ಗ್ರಾಮದ ಮುಖ್ಯಸ್ಥರಾದ ಕೆ.ಡಿ ವೀರಪ್ಪ, ಮೂಡುಗದ್ದೆ ಎಂ.ಡಿ ಲಿಖಿತ್ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು