ಸುಂಟಿಕೊಪ್ಪ, ಏ. ೨೪: ಕೊಡಗರಹಳ್ಳಿಯ ಕುಂದೂರು ಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೮ ನೇ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು.
ತಾ. ೧೩ ಸಂಜೆ ಶ್ರೀ. ಮುನೀಶ್ವರ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೧೪ ರಂದು ಮಹಾಚಂಡಿಕಾಯಾಗ ನಡೆದು ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ತಾ. ೧೭ ರಂದು ಶ್ರೀ ಮಹಾ ವಿಷ್ಣುವಿನ ಪೂಜೆ ನಡೆಯಿತು. ತಾ. ೨೦ ಪೂರ್ವಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಚಾಲನೆ ದೊರೆಯಿತು. ನಂತರ ಸಂಜೆ ೭ ಗಂಟೆಯಿAದ ದೀಪರಾಧನೆ ಏಳು ಸುತ್ತಿನ ಪ್ರದಕ್ಷಣೆ ಹಾಗೂ ಶ್ರೀ ಚಾಮುಂಡಿ ತಂಡದಿAದ ಚಂಡೆ ಮೇಳ ಜರುಗಿತು.
ಮರುದಿನ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆ ನಡೆಯಿತು. ರಾತ್ರಿ ವಿವಿಧ ದೈವಗಳ ಕೋಲಗಳು ನಡೆದು ೨೨ ರಂದು ಪೂರ್ವಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲ ಹಾಗೂ ರಾತ್ರಿ ೮ ಗಂಟೆಗೆ ಶ್ರೀದೇವಿಗೆ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆಬಿತ್ತು..