ಮಡಿಕೇರಿ, ಏ. ೨೪: ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ವತಿಯಿಂದ ಸೀಸನ್-೪ ಕ್ರಿಕೆಟ್ ಪಂದ್ಯಾಟ ಮತ್ತು ಕೊಡಗು ಜಿಲ್ಲಾಮಟ್ಟದ ಪುರುಷ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಗಳು ಹಾಗೂ ಜಿಲ್ಲಾ ಮಟ್ಟದ ಪುರುಷರ ಗುಡ್ಡಗಾಡು ಓಟದ ಸ್ಪರ್ಧೆಗಳು ತಾ.೨೫(ಇಂದು) ಹಾಗೂ ತಾ.೨೬ರಂದು ನಡೆಯಲಿವೆ ಎಂದು ಕ್ಲಬ್ ಅಧ್ಯಕ್ಷ ದುಗ್ಗಳ ಕಪಿಲ್ ಅವರು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
ತಾ.೨೫ ಹಾಗೂ ತಾ.೨೬ ರಂದು ಕ್ರಿಕೆಟ್ ಪಂದ್ಯಾಟ ೬ ಆಹ್ವಾನಿತ ತಂಡಗಳ ನಡುವೆ ನಡೆಯಲಿದೆ.
ತಾಲೂಕು ಮಟ್ಟದ ಗುಡ್ಡಗಾಡು ಓಟ (ಪುರುಷರಿಗೆ ಮಾತ್ರ ಸೀಮಿತವಾದ ಕ್ರೀಡೆ) ತಾ.೨೬ ರಂದು ಗಾಳಿಬೀಡು ಹೈಸ್ಕೂಲ್ ಶಾಲಾ ಮೈದಾನದ ಹತ್ತಿರದಿಂದ ಬೆ.೭ ಗಂಟೆಗೆ ಪ್ರಾರಂಭವಾಗಲಿದೆ.
ಹಗ್ಗ ಜಗ್ಗಾಟ ೭+೨ (ಕೊಡಗು ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮಾತ್ರ ಸೀಮಿತವಾದ ಸ್ಪರ್ಧೆ) ತಾ.೨೬ ರಂದು ನಡೆಯಲಿದೆ. ಎಲ್ಲಾ ಕ್ರೀಡಾಕೂಟಗಳು ಗಾಳಿಬೀಡು ಹೈ ಸ್ಕೂಲ್ ಶಾಲಾ ಮೈದಾನದಲ್ಲಿ ನಡೆಸಲಾಗುವುದು ಎಂದರು.
ಗಾಳಿಬೀಡು ಗ್ರಾಮಸ್ಥರಿಗೆ ಸೀಮಿತವಾದ ಕ್ರೀಡೆಗಳು (ತಾ.೨೬ ರಂದು)
ಕಾಳು ಹೆಕ್ಕುವುದು (೪ ವರ್ಷದ ಒಳಗಿನ ಮಕ್ಕಳಿಗೆ), ೧೦೦ ಮೀಟರ್ ಓಟ - ಕಿರಿಯ ಬಾಲಕ /ಬಾಲಕಿಯರಿಗೆ (೧ ರಿಂದ ೪ ತರಗತಿ), ೧೦೦ ಮೀಟರ್ ಓಟ - ಹಿರಿಯ ಬಾಲಕ/ಬಾಲಕಿಯರಿಗೆ (೫ ರಿಂದ ೭ನೇ ತರಗತಿ ಮಕ್ಕಳಿಗೆ), ೧೦೦ ಮೀಟರ್ ಓಟ-ಪ್ರೌಢಶಾಲಾ ಬಾಲಕ /ಬಾಲಕಿಯರಿಗೆ (೮ ರಿಂದ ೧೦ನೇ ತರಗತಿ), ೧೦೦ ಮೀಟರ್ ಓಟ (ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಬಾಲಕ ಹಾಗೂ ಬಾಲಕಿಯರಿಗೆ), ೧೦೦ ಮೀಟರ್ ಓಟ (ಪುರುಷ ಹಾಗೂ ಮಹಿಳೆಯರಿಗೆ), ವಿಷದ ಚೆಂಡು (ಮಹಿಳೆ ಹಾಗೂ ಪುರುಷರಿಗೆ).
ಬಹುಮಾನಗಳು
ಹಗ್ಗಜಗ್ಗಾಟದ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.೨೦,೦೦೦ ಹಾಗೂ ದ್ವಿತೀಯ ಬಹುಮಾನ ರೂ.೧೦,೦೦೦ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಹಗ್ಗ ಜಗ್ಗಾಟದ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. ೧೦,೦೦೦, ದ್ವಿತೀಯ ಬಹುಮಾನ ರೂ.೫,೦೦೦ ಹಾಗೂ ಆಕರ್ಷಕ ಟ್ರೋಫಿ ದೊರಕಲಿದೆ. ಗುಡ್ಡಗಾಡು ಓಟದ ಸ್ಪರ್ಧೆಯ ಪ್ರಥಮ ಬಹುಮಾನ ರೂ.೫,೦೦೦, ದ್ವಿತೀಯ ಬಹುಮಾನ ರೂ. ೩,೦೦೦, ತೃತೀಯ ಬಹುಮಾನ ರೂ. ೧,೫೦೦ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ದಿಶಾಂತ್, ಖಜಾಂಚಿ ಬಬಿತ್ ಪೂಜಾರಿ, ಜಂಟಿ ಕಾರ್ಯದರ್ಶಿ ಶಿವಪ್ರಸಾದ್ ರೈ ಹಾಗೂ ಸಹ ಕಾರ್ಯದರ್ಶಿ ಸಂಗಮ್ ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ ದುಗ್ಗಳ ಕಪಿಲ್ - ೯೭೩೧೦೦೯೮೪೧, ರಂಜು ಕೊಂಬಾರನ- ೯೭೪೦೧೯೮೭೪೩ ಸಂಪರ್ಕಿಸಬಹುದಾಗಿದೆ.