ಮಡಿಕೇರಿ, ಏ. ೨೪: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಚೇನಂಡ ಕಪ್ ಹಾಕಿಯಲ್ಲಿಂದು ಕುಲ್ಲೇಟಿರ ತಂಡವು ಆತಿಥೇಯ ಚೇನಂಡ ತಂಡವನ್ನು ೫-೦ ಅಂತರದಲ್ಲಿ ಮಣಿಸಿದ್ದು, ಆತಿಥೇಯ ಚೇನಂಡ ಟೂರ್ನಿಯಿಂದ ನಿರ್ಗಮಿಸಿತು.

ಇಟ್ಟಿರ ತಂಡವು ಮೇರಿಯಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೨-೧ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೨-೨ ಸಮಬಲವಾಗಿತ್ತು.

ಬಿದ್ದಾಟಂಡ ತಂಡವು ಮೇಚಿಯಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೪-೩ ಅಂತರದಲ್ಲಿ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.

ಮಚ್ಚಾರಂಡ ತಂಡವು ಬೊಳ್ಳೇಪಂಡ ತಂಡದ ವಿರುದ್ಧ ೩-೨ ಅಂತರದಲ್ಲಿ ಗೆಲುವು ಸಾಧಿಸಿತು. ಪಳಂಗAಡ ತಂಡವು ಕಾಂಡAಡ ತಂಡದ ವಿರುದ್ಧ ೧-೦ ಅಂತರದಲ್ಲಿ ಜಯ ಬೀರಿತು. ಪರದಂಡ ತಂಡವು ಐಚೆಟ್ಟಿರ ತಂಡದ ವಿರುದ್ಧ ಟೈ ಬ್ರೇಕರ್‌ನಲ್ಲಿ ೫-೪ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.

ಪೆಮ್ಮಂಡ ತಂಡವು ಮುರುವಂಡ ತಂಡವನ್ನು ೧-೦ ಅಂತರದಲ್ಲಿ ಸೋಲಿಸಿತು. ಮೇಕೇರಿರ ತಂಡವು ೫-೦ ಅಂತರದಲ್ಲಿ ಕಾಡ್ಯಮಾಡ ತಂಡವನ್ನು ಸೋಲಿಸಿತು. ಚೇಂದಿರ ತಂಡವು ಕೊಂಗAಡ ತಂಡದ ವಿರುದ್ಧ ೨-೧ ಅಂತರದಲ್ಲಿ ಜಯ ಸಾಧಿಸಿತು.

ಸಣ್ಣುವಂಡ ತಂಡವು ಬೊವ್ವೇರಿಯಂಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಮಂಡೇಪAಡ ತಂಡವು ಪಟ್ಟಚೆರುವಂಡ ತಂಡವನ್ನು ೪-೦ ಅಂತರದಲ್ಲಿ ಮಣಿಸಿತು.