ಪೊನ್ನಂಪೇಟೆ, ಏ. ೨೪: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಟೀಮ್ ಕೊಡವ ಟ್ರೆöÊ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂಜಿಗೇರಿ ನಾಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಎಲಿಮಿನೇಟರ್ ಪಂದ್ಯದಲ್ಲಿ ಎಂ.ಟಿ.ಬಿ ರಾಯಲ್ಸ್ ತಂಡದ ವಿರುದ್ಧ ಪರಾಭವಗೊಂಡ ಕೂರ್ಗ್ ಟೈಟಾನ್ ತಂಡ ಪಂದ್ಯಾವಳಿಯಲ್ಲಿ ತನ್ನ ಹೋರಾಟ ಮುಗಿಸಿ ನಿರ್ಗಮಿಸಿತು.
ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಕೊಡವ ಟ್ರೆöÊಬ್ ನಿಗದಿತ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೫೨ ರನ್ ಕಲೆಹಾಕಿ, ಅಂಜಿಗೇರಿ ನಾಡ್‌ಗೆ ೧೫೩ ರನ್ ಗುರಿ ನೀಡಿತು. ಅಂಕುಶ್ ಬೋಪಣ್ಣ ೪೩ ಎಸೆತಗಳಲ್ಲಿ ೫೩, ಗೌರವ್ ಅಪ್ಪಣ್ಣ ೨೫ ಎಸೆತಗಳಲ್ಲಿ ೩೧, ಪೊನ್ನಪ್ಪ ೩೧ ಎಸೆತಗಳಲ್ಲಿ ೨೮ ರನ್‌ಗಳ ಕಾಣಿಕೆ ನೀಡಿದರು. ಅಂಜಿಗೇರಿ ನಾಡ್ ಪರ ಗಗನ್ ಗಣಪತಿ, ಮಂಜು ಕೆ. ಬಿ, ತಲಾ ೨ ವಿಕೆಟ್, ಸುಮುಖ್ ೧ ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಅಂಜಿಗೇರಿ ನಾಡ್ ೧೬ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ, ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ಶಮಿತ್ ಸೋಮಣ್ಣ ೩೭ ಎಸೆತಗಳಲ್ಲಿ ಭರ್ಜರಿ ೬೪ ರನ್ ಸಿಡಿಸಿದರು, ಮಂಜು ಕೆ. ಬಿ. ೩೦ ಎಸೆತಗಳಲ್ಲಿ ೩೯, ಅಕರ್ಷ್ ಪೂವಯ್ಯ ೧೩ ಎಸೆತಗಳಲ್ಲಿ ೨೪, ಸುಮುಖ್ ೧೬ ಎಸೆತಗಳಲ್ಲಿ ೧೪ ರನ್ ಬಾರಿಸಿದರು. ಟೀಮ್ ಕೊಡವ ಟ್ರೆöÊಬ್ ಪರ ಗೌರವ್ ಅಪ್ಪಣ್ಣ ಮತ್ತು ದೇವಯ್ಯ ತಲಾ ೧ ವಿಕೆಟ್ ಪಡೆದರು. ಅಂಜಿಗೇರಿ ನಾಡ್‌ನ ಮಂಜು ಕೆ. ಬಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ಕೂರ್ಗ್ ಟೈಟಾನ್ ಮತ್ತು ಎಂ.ಟಿ.ಬಿ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಟೈಟಾನ್ ೧೬.೨ ಓವರ್‌ಗಳಲ್ಲಿ ೭೧ ರನ್‌ಗಳ ಅಲ್ಪ ಮೊತ್ತಕ್ಕೆ ಸರ್ವ ಪತನಗೊಂಡು ಎಂ.ಟಿ.ಬಿ ರಾಯಲ್ಸ್ಗೆ ೭೨ ರನ್ ಗುರಿ ನೀಡಿತು. ಡೆಲ್ವಿನ್ ೧೦ ಎಸೆತಗಳಲ್ಲಿ ೧೪, ಅಚ್ಚಪ್ಪ ೧೮ ಎಸೆತಗಳಲ್ಲಿ ೧೦ ರನ್ ಗಳಿಸಿದರು. ಎಂ.ಟಿ.ಬಿ. ರಾಯಲ್ಸ್ ಪರ ಅಯ್ಯಪ್ಪ ಮತ್ತು ನೆಲ್ ೩ ವಿಕೆಟ್ ಪಡೆದು ಮಿಂಚಿದರು. ಸುಕ್ಕಿ ೨, ಪ್ರತೀಕ್ ತಿಮ್ಮಯ್ಯ, ಶಿಪ್ರೆಜ್ ಸೋಮಣ್ಣ ತಲಾ ೧ ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ೧೦.೩ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸುವ ಮೂಲಕ ಕ್ವಾಲಿಫೈಯರ್ ೨ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿತು. ವೈಶಾಖ್ ತಿಮ್ಮಯ್ಯ ೨೪ ಎಸೆತಗಳಲ್ಲಿ ೨೬, ಸುಕ್ಕಿ ೨೨ ಎಸೆತಗಳಲ್ಲಿ ೨೧, ಮಿಥುನ್ ಮುತ್ತಣ್ಣ ೧೮ ಎಸೆತಗಲ್ಲಿ ೨೧ ರನ್ ಗಳ ಕಾಣಿಕೆ ನೀಡಿದರು. ಕೂರ್ಗ್ ಟೈಟಾನ್ಸ್ ಪರ ಪ್ರತೀಕ್ ನಂಜಪ್ಪ ಏಕೈಕ ವಿಕೆಟ್ ಪಡೆದರು. ಎಂ.ಟಿ.ಬಿ. ರಾಯಲ್ಸ್ನ ನೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ