ಕೋವರ್ಕೊಲ್ಲಿ ಇಂದ್ರೇಶ್
ನವದೆಹಲಿ, ಏ. ೨೩: ರಾಜ್ಯ ಹಾಗೂ ರಾಷ್ಟಿçÃಯ ಹೆದ್ದಾರಿಗಳ ಪಕ್ಕದಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನವನ್ನು ಹೊರಡಿಸಿದೆ.
ಹೆದ್ದಾರಿಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುವುದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಹೆದ್ದಾರಿಯು ವಾಹನಗಳ ಸುಗಮ ಸಂಚಾರಕ್ಕಾಗಿ ಇದೆಯೇ ಹೊರತು ನಿಲುಗಡೆಗೆ ಅಲ್ಲ ಎಂದು ಹೇಳಿದೆ. ರಾಷ್ಟಿçÃಯ ಹೆದ್ದಾರಿಯ ಮುಖ್ಯರಸ್ತೆ ಹಾಗೂ ತಿರುವುಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸುಪ್ರೀಂ ಕೋರ್ಟ್ ದೇಶಾದ್ಯಂತ ವ್ಯಾಪಕ ನಿರ್ದೇಶನಗಳನ್ನು ನೀಡಿದೆ, ಆಡಳಿತಾತ್ಮಕ ಲೋಪಗಳು ಅಥವಾ ಮೂಲಸೌಕರ್ಯ ಅಂತರಗಳಿAದಾಗಿ ಎಕ್ಸ್ಪ್ರೆಸ್ವೇಗಳು “ಅಪಾಯದ ಕಾರಿಡಾರ್ಗಳು” ಆಗಿ ಬದಲಾಗಬಾರದು ಎಂದು ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅತುಲ್ ಎಸ್ ಚಂದೂರ್ಕರ್ ಅವರ ಪೀಠವು, ರಾಷ್ಟಿçÃಯ ಹೆದ್ದಾರಿಗಳು ಭಾರತದ ರಸ್ತೆ ಜಾಲದ ಕೇವಲ ೨% ರಷ್ಟಿದೆ; ಆದರೆ ಸುಮಾರು ೩೦% ರಸ್ತೆ ಸಾವುಗಳಿಗೆ ಕಾರಣವಾಗಿವೆ ಎಂದು ಗಮನಿಸಿದೆ.
ರಸ್ತೆ ಸುರಕ್ಷತೆಯು ನೇರವಾಗಿ ಸಂವಿಧಾನದ ಆರ್ಟಿಕಲ್ ೨೧ರ ಅಡಿಯಲ್ಲಿ ಜೀವಿಸುವ ಹಕ್ಕಿಗೆ ಸಂಪರ್ಕ ಹೊಂದಿದೆ. “ಭಾರತದ ಸಂವಿಧಾನದ ಆರ್ಟಿಕಲ್ ೨೧ ರ ಅಡಿಯಲ್ಲಿ ಪ್ರತಿಪಾದಿಸಲಾದ ‘ಜೀವನದ ಹಕ್ಕು’ ಕೇವಲ ಕಾನೂನುಬಾಹಿರವಾಗಿ ಜೀವ ತೆಗೆಯುವುದರ ವಿರುದ್ಧದ ಖಾತರಿಯಲ್ಲ, ಆದರೆ ಮಾನವಜೀವವನ್ನು ಸಂರಕ್ಷಿಸುವ ಮತ್ತು ಮೌಲ್ಯಯುತಗೊಳಿಸುವ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಮೇಲಿನ ಸಕಾರಾತ್ಮಕ ಆದೇಶವಾಗಿದೆ” ಎಂದು ನ್ಯಾಯಾಲಯವು ಹೇಳಿದೆ.
ರಾತ್ರಿ ವೇಳೆ ಅಥವಾ ಮಂಜು ಮುಸುಕಿದ ಸಮಯದಲ್ಲಿ ಹೆದ್ದಾರಿ ಬದಿ ನಿಂತಿರುವ ವಾಹನಗಳಿಗೆ ಹಿಂದಿನಿAದ ಬರುವ ವಾಹನಗಳು ಡಿಕ್ಕಿ ಹೊಡೆದು ನಿತ್ಯವೂ ದೇಶದ ವಿವಿಧ ಭಾಗಗಳಲ್ಲಿ ಜೀವಗಳು ಬಲಿಯಾಗುತ್ತಿವೆ. ಅಕ್ರಮ ಪಾರ್ಕಿಂಗ್ನಿAದಾಗಿ ವೇಗವಾಗಿ ಚಲಿಸುವ ವಾಹನಗಳಿಗೆ ಅಡ್ಡಿಯುಂಟಾಗುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದೆ. ನಿಂತಿರುವ ವಾಹನಗಳನ್ನು ತಪ್ಪಿಸಲು ಚಾಲಕರು ದಿಢೀರನೆ ಲೇನ್ ಬದಲಿಸುವುದು ಭೀಕರ ಅಪಘಾತಗಳಿಗೆ ದಾರಿಯಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (ಎಟಿಎಂಎಸ್), ಜಿಪಿಎಸ್ ಆಧಾರಿತ ಛಾಯಾಚಿತ್ರ ಪುರಾವೆಗಳು ಮತ್ತು ಇ ಚಲನ್ ಕಾರ್ಯವಿಧಾನಗಳ ಮೂಲಕ ಕಾನೂನು ಜಾರಿಗೊಳಿಸುವಿಕೆಯನ್ನು ಮಾಡಬೇಕು ಎಂದು ಪೀಠ ಸರ್ಕಾರಕ್ಕೆ ಆದೇಶಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ಸೇರಿದಂತೆ ಅಧಿಕಾರಿಗಳು ೬೦ ದಿನಗಳಲ್ಲಿ ಈ ಜಾರಿಗೊಳಿಸಬೇಕು. ತಪಾಸಣೆ ಮತ್ತು ಗಸ್ತು ತಿರುಗುವಿಕೆಗಾಗಿ ಜಿಲ್ಲಾಮಟ್ಟದ ಸಮಿತಿ ರಚಿಸಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಜಾರಿಮಾಡಲು ಕೋರ್ಟ್ ಸೂಚಿಸಿದೆ. ಅಕ್ರಮ ಕಟ್ಟಡಗಳ ಮೇಲೆ ಕಾನೂನು ಕ್ರಮದ ಜತೆಗೇ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಈ ಹಿಂದೆ ಕೋರ್ಟ್ ನೀಡಿರುವ ಕಟ್ಟಡ ನಿರ್ಮಾಣ ಗಡಿ ರೇಖೆಯ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆಯಲ್ಲದೆ ಒಂದು ಪ್ರಮುಖ ಹೆಜ್ಜೆಯಾಗಿ, ಹೆದ್ದಾರಿಯ ಮಾರ್ಜಿನ್ನೊಳಗೆ ಹೊಸ ಡಾಬಾಗಳು ಅಥವಾ ವಾಣಿಜ್ಯ ರಚನೆಗಳ ನಿರ್ಮಾಣ ಅಥವಾ ಕಾರ್ಯಾಚರಣೆಯನ್ನು ತಕ್ಷಣ ನಿಷೇಧಿಸಲು ನ್ಯಾಯಾಲಯ ಆದೇಶಿಸಿದೆ. ಈಗಾಗಲೇ ಅಕ್ರಮ ಕಟ್ಟಡ ನಿರ್ಮಾಣ ಆಗಿದ್ದಲ್ಲಿ ಅವುಗಳನ್ನು ೬೦ ದಿನಗಳಲ್ಲಿ ತೆರವುಗೊಳಿಸುವಂತೆಯೂ ಖಡಕ್ ಆದೇಶ ನೀಡಿದೆ. ಇದಲ್ಲದೆ ಓಊಂI ಅಥವಾ PWಆ ಯಿಂದ ಅನುಮತಿ ಇಲ್ಲದೆ ಹೆದ್ದಾರಿ ಸುರಕ್ಷತಾ ವಲಯದೊಳಗೆ ಯಾವುದೇ ಹೊಸ ಪರವಾನಗಿ ಅಥವಾ ಅನುಮೋದನೆಯನ್ನು ನೀಡಬಾರದು ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಪರವಾನಗಿಗಳನ್ನು ೩೦ ದಿನಗಳಲ್ಲಿ ಪರಿಶೀಲಿಸಬೇಕು ಎಂದು ಅದು ನಿರ್ದೇಶಿಸಿದೆ. ಇದರ ಜತೆಗೇ ಜಿಲ್ಲಾಡಳಿತ ಪೊಲೀಸ್, ಎನ್ಹೆಚ್ಎಐ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಹೆದ್ದಾರಿ ಸುರಕ್ಷತಾ ಕಾರ್ಯಪಡೆಗಳನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲೂ ೧೫ ದಿನಗಳೊಳಗೆ ರಚಿಸುವಂತೆ ಪೀಠವು ಆದೇಶಿಸಿದೆ. ಕಾರ್ಯಪಡೆ ರಚನೆಯ ನಂತರ ಹೆದ್ದಾರಿಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕೂಡಲೇ ಟೋಯಿಂಗ್ ಮಾಡಲಾಗುತ್ತದೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಮಾಲೀಕರಿಗೆ ಬಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಮುಂದೆ ಪ್ರತೀ ಹೆದ್ದಾರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ಸಂಚಾರದ ಮೇಲೆ ನಿಗಾ ಇಡಲಾಗುತ್ತಿದೆ. ಅಲ್ಲದೇ ಆನ್ಲೈನ್ ಚಲನ್ ಕೂಡ ಜನರೇಟ್ ಆಗಲಿದೆ. ಹೆದ್ದಾರಿಯಲ್ಲಿ ಸರ್ಕಾರ ಗುರುತಿಸಿರುವ ಅಧಿಕೃತ ಪಾರ್ಕಿಂಗ್ ತಾಣಗಳು ಅಥವಾ ವಿಶ್ರಾಂತಿ ಗೃಹಗಳಲ್ಲಿ ಮಾತ್ರವೇ ವಾಹನಗಳನ್ನು ನಿಲ್ಲಿಸಬೇಕು. ಅಲ್ಲದೇ ಸುರಕ್ಷಿತವೆನಿಸುವ ಟೋಲ್ ಪ್ಲಾಜಾಗಳ ಬಳಿಯ ನಿಗದಿತ ಜಾಗಗಳಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರವೇ ಎಮರ್ಜೆನ್ಸಿ ಲೇನ್ ಬಳಸಬಹುದು. ಆದರೆ ಅಲ್ಲಿಯೂ ಎಚ್ಚರಿಕೆ ಲೈಟ್ಗಳನ್ನು ಆನ್ ಮಾಡುವುದು ಕಡ್ಡಾಯ ಆಗಿದೆ. ೨೦೨೫ ರ ನವೆಂಬರ್ನಲ್ಲಿ ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ೩೪ ಜನರ ಸಾವಿಗೆ ಕಾರಣವಾದ ಅಪಘಾತಗಳ ನಂತರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶವನ್ನು ನೀಡಿದ್ದು. ಮುಂದಿನ ೭೫ ದಿನಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ ಮತ್ತು ಹೆಚ್ಚಿನ ವಿಚಾರಣೆಗೆಯನ್ನು ಜೂನ್ ತಿಂಗಳಿಗೆ ಮುಂದೂಡಿದೆ.