ಮಡಿಕೇರಿ, ಏ. ೨೨: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲೂಕು ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ನಡೆದ ೧೦ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ ಬಿದ್ದಿತು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಮತ್ತಿತರ ಕ್ರೀಡಾಕೂಟಗಳಲ್ಲಿ ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಸಾವಿರಾರು ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಕ್ರಿಕೆಟ್ ಪಂದ್ಯಾವಳಿಯಲ್ಲ್ಲಿ ಡಾಮಿನೇಟರ್ ಮಾರ್ಗೊಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ವಿನಾಯಕ ಕೊಡಗು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಗೇರ ಫ್ರೆಂಡ್ಸ್ ಸುಳ್ಯ ಪ್ರಥಮ ಹಾಗೂ ಭರತ್ ಫ್ರೆಂಡ್ಸ್ ಬೆಳ್ಳರಿಮಾಡು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಮಹಿಳೆಯರ ಸ್ಪರ್ಧೆಯಲ್ಲಿ ಡಾಮಿನೇಟರ್ ಚೆಯ್ಯಂಡಾಣೆ ಪ್ರಥಮ ಮತ್ತು ಕಿಗ್ಗಾಲು ವಾರಿಯರ್ಸ್ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಷಣ್ಮುಗ ಹೆಬ್ಬೆಟ್ಟಗೇರಿ ಎ ಮತ್ತು ಬಿ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾರ್ಣಿಕ ಹೆಬ್ಬೆಟ್ಟಗೇರಿ ಪ್ರಥಮ ಸ್ಥಾನ ಹಾಗೂ ಟೇಮ್ ಬಾಳಿಲ ಸುಳ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಸಮುದಾಯ ಭವನದ ಭರವಸೆ
ಕ್ರಿಕೆಟ್ ಅಂತಿಮ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕÀ ಎ.ಎಸ್.ಪೊನ್ನಣ್ಣ ಅವರು ಮೊಗೇರ ಜನಾಂಗ ಕ್ರೀಡೆಯ ಮೂಲಕ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೊಗೇರ ಬಂಧುಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಮೊಗೇರ ಸಮಾಜದ ಹಲವು ವರ್ಷಗಳ ಬೇಡಿಕೆಯಾದ ಮೊಗೇರ ಸಮುದಾಯ ಭವನದ ನಿರ್ಮಾಣಕ್ಕೆ ಶಕ್ತಿಮೀರಿ ಪ್ರಯತ್ನಿಸಲಾಗುವುದು ಮತ್ತು ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿAದ ಎಲ್ಲಾ ಸಮುದಾಯದವರು ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಕ್ರೀಡೆಯ ಮೂಲಕ ಸರ್ವರೂ ಒಗ್ಗಟ್ಟನ್ನು ಕಾಪಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಶಾಸಕರು ಬ್ಯಾಟಿಂಗ್ ಮಾಡಿ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿದರು. ಸಮಾಜ ಸೇವಕರು ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಅವರು ಬೌಲಿಂಗ್ ಮಾಡಿದರು.
ಮೊಗೇರ ಹಬ್ಬ
ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಹಬ್ಬದಂತೆ ನಡೆಯಿತು. ಮೊಗೇರ ಜನಾಂಗದ ಸಾಂಸ್ಕೃತಿಕ ದುಡಿ ನಲಿಕೆ ಹಾಗೂ ಅದರ ಪ್ರದರ್ಶನ ಗಮನ ಸೆಳೆಯಿತು. ವೇದಿಕೆಯ ಒಂದು ಭಾಗದಲ್ಲಿ ಮೊಗೇರ ಜನಾಂಗದ “ಬರಿ”ಯ ಹೆಸರು, ಮತ್ತೊಂದು ಭಾಗದಲ್ಲ್ಲಿ ಜಿಲ್ಲೆಯಲ್ಲಿ ಮೊಗೇರ ಜನಾಂಗದ ಲಾಂಛನ ಅಸ್ತಿತ್ವಕ್ಕೆ ಬಂದ ಬಗ್ಗೆ ಮಾಹಿತಿಯ ಫಲಕ ಹಾಕಲಾಗಿತ್ತು. ಕ್ರೀಡಾಕೂಟದ ಉದ್ಘಾಟನೆಯಂದು ಮೊಗೇರ ಲಾಂಛನದ ಧ್ವಜಾರೋಹಣ ಮಾಡಲಾಯಿತು.
ಮೊಗೇರ ಸಮುದಾಯದ ರಂಗಭೂಮಿ ಕಲಾವಿದರು ಹಾಗೂ ಸು-ಫ್ರಮ್-ಸೊ ಸಿನಿಮಾದ ಕಲಾವಿದರಾದ ಶಿವು ಅಳಿಕೆ, ಪದ್ಮಾನಾಭ ತುಮಿನಾಡು ಮತ್ತಿತರರು ಪಾಲ್ಗೊಂಡು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗು ತಂದರು. ಮಡಿಕೇರಿ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಪಿ.ಸಿ.ರಘು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಿತು.
ಮೊಗೇರ ಸಮಾಜದ ಸ್ಥಾಪಕಾಧ್ಯಕ್ಷ ಟಿ.ಸದಾನಂದ ಮಾಸ್ಟರ್, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಕಿರಗಂದೂರು, ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಜನಾರ್ಧನ್ ಪಿ.ಬಿ, ರಾಜ್ಯ ಮೊಗೇರ ಸಮಾಜದ ಉಪಾಧ್ಯಕ್ಷ ಪಿ.ಕೆ. ಚಂದ್ರು, ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ, ಜಿಲ್ಲಾ ಮೊಗೇರ ಸಮಾಜದ ಉಪಾಧ್ಯಕ್ಷ ದಾಮೋದರ ಬಿ.ಎಂ, ಜಿಲ್ಲಾ ಸಲಹೆಗಾರ ಪಿ.ಎಂ. ರವಿ, ಕ್ರೀಡಾಕೂಟದ ಅಧ್ಯಕ್ಷ ಎಂ.ಜಿ.ಚAದ್ರ, ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೊಲೀಸ್ ಸಿಬ್ಬಂದಿ ಕಿಶೋರ್ ಬೋಯಿಕೇರಿ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ರಾಮಚಂದ್ರ, ಗುತ್ತಿಗೆದಾರ ಮುತ್ತಣ್ಣ, ಹಾಸನ ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷ ಅಣ್ಣಪ್ಪ ಬಾಳುಪೇಟೆ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಮೇಶ್ ಹೆಬ್ಬೆಟ್ಟಗೇರಿ ನಿರೂಪಿಸಿ, ವಂದಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ರವಿ ಭೂತನಕಾಡು, ಸಾಹಿತ್ಯ ಕ್ಷೇತ್ರದಲ್ಲಿ ಚೈತ್ರಾ ಬೊಳ್ಳರಿ ಮಾಡು ಹಾಗೂ ಸಮಾಜ ಸೇವೆಯಲ್ಲಿ ಚಂದ್ರ ಎಂ.ಜಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.