ಸೋಮವಾರಪೇಟೆ, ಏ. ೨೨: ತಾಲೂಕಿನ ಯಲಕನೂರು-ಹಳೆಮದಲಾಮರ ಗ್ರಾಮದ ಜನವಸತಿ ಪ್ರದೇಶದಲ್ಲಿ ನೂತನ ಕಲ್ಲು ಗಣಿಗಾರಿಕೆಗೆ ಕೆಲವರು ಅರ್ಜಿ ಸಲ್ಲಿಸಿದ್ದು, ಗಣಿಗಾರಿಕೆ ಪ್ರಾರಂಭಿಸಲು ಸಂಬAಧಿಸಿದ ಇಲಾಖೆಗಳು ನಿರಾಪೇಕ್ಷಣಾ ಪತ್ರ ನೀಡಬಾರದೆಂದು ಗ್ರಾಮಸ್ಥರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಬಸವೇಶ್ವರ ಮತ್ತು ಶ್ರೀ ಕುಮಾರಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಜೆ. ಉಮೇಶ್ ಮಾತನಾಡಿ, ಈಗಾಗಲೇ ಸಂಬAಧಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮತ್ತೂ ಅನುಮತಿ ನೀಡಿದಲ್ಲಿ ಗ್ರಾಮಸ್ಥರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ನೇರುಗಳಲೆ ಗ್ರಾಮ ಪಂಚಾಯಿತಿಗೆ ಸೇರಿದ ಯಲಕನೂರು (ಹಳೆ ಮದಲಾಪುರ) ಗ್ರಾಮದ ಸ.ನಂ. ೩೬/೮ ರಲ್ಲಿ ಕಲ್ಲುಕೋರೆ ಇದ್ದು. ಕಲ್ಲುಕೋರೆಯಲ್ಲಿ ಕಲ್ಲು ಗಣಿಗಾರಿಕೆ ಪ್ರಾರಂಭಿಸಲು ಕೆಲವು ವ್ಯಕ್ತಿಗಳು ನಿರಾಪೇಕ್ಷಣಾ ಪತ್ರಕ್ಕಾಗಿ ಅರ್ಜಿ ನೀಡಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ.

ಆದರೆ, ಕಲ್ಲುಕೋರೆ ಇರುವ ಜಾಗದ ೧೦ ಮೀ. ದೂರದಲ್ಲಿ ಗಿರಿಜನ (ಬುಡಕಟ್ಟು) ಕಾಲೋನಿ ಇದ್ದು, ಅಲ್ಲಿ ೨೫ ಕುಟುಂಬದವರು ವಾಸವಾಗಿರುತ್ತಾರೆ. ಪಕ್ಕದಲ್ಲಿ ಪುರಾತನ ಬಸವಣ್ಣ ದೇವರು ಇದ್ದು, ಹಾಗೂ ಶ್ರೀ ಬಸವೇಶ್ವರ ಹಾಗೂ ಕುಮಾರಲಿಂಗೇಶ್ವರ ದೇವಸ್ಥಾನದ ನಿರ್ಮಾಣಕ್ಕಾಗಿ ಸರ್ಕಾರದ ಮುಜರಾಯಿ ಇಲಾಖೆ ಮೂಲಕ ರೂ. ೩ ಲಕ್ಷ ಹಣ ಬಿಡುಗಡೆಯಾಗಿದ್ದು, ಕೆಲಸ ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಹೊಂದಿಕೊAಡAತೆ ಕಕ್ಕೆಹೊಳೆ ಮತ್ತು ಜೇನುಕಲ್ಲು ಬೆಟ್ಟದ ಮೀಸಲು ಅರಣ್ಯ, ಸುತ್ತಮುತ್ತಲು ವ್ಯವಸಾಯದ ಜಮೀನು ಇದ್ದು, ಪಕ್ಕದಲ್ಲಿಯೇ ಹೊಳೆ ಹರಿಯುತ್ತಿದೆ. ಇಲ್ಲಿ ಕಾಲೋನಿ ರಸ್ತೆ ಮೂಲಕ ಪ್ರತಿ ದಿನ ಸಾಕಷ್ಟು ವಾಹನಗಳು ಓಡಾಡುತ್ತಿದ್ದು, ಗಣಿಗಾರಿಕೆ ಪ್ರಾರಂಭಿಸಿದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.

ಯಲಕನೂರು-ಹಳೆ ಮದಲಾಪುರ ಗ್ರಾಮದ ಕಲ್ಲುಕೋರೆ ಇರುವ ಜಾಗದ ಸರ್ವೆ ನಂ. ೩೬/೮ರ ಜಾಗಕ್ಕೆ ಕಲ್ಲು ಗಣಿಗಾರಿಕೆ ಮಾಡಲು ನಿರಾಪೇಕ್ಷಣಾ ಪತ್ರ ನೀಡಬಾರದು ಎಂದು ಈಗಾಗಲೇ ರಾಜ್ಯದ ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ೧೫ ದಿನಗಳ ಒಳಗೆ ಲಿಖಿತವಾಗಿ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ನೀಡಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ, ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಜೆ.ಕೆ. ಆಕಾಶ್, ಗ್ರಾಮಸ್ಥರಾದ ಕೆ.ಪಿ. ಸುರೇಶ್, ರಾಜು ಹಾಗೂ ಸಚಿನ್ ಇದ್ದರು.