ಮಡಿಕೇರಿ ಏ.೨೨ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಆತಿಥೇಯ ಬೇತ್ರಿ ಮುಕ್ಕಾಟಿರ ತಂಡ ಸೋಲನುಭವಿಸಿದ್ದು, ಮೋಟನಾಳಿರ ಹಾಗೂ ಮಚ್ಚಮಾಡ ತಂಡಗಳು ಭರ್ಜರಿ ಮುನ್ನಡೆ ಸಾಧಿಸಿದವು.

ಮೈದಾನ ೧ರಲ್ಲಿ ನಡೆದ ಪಂದ್ಯದಲ್ಲಿ ಮೋಟನಾಳಿರ ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ ಮೋಟನಾಳಿರ ೨೫ ರನ್‌ಗಳಿಂದ ಗೆಲುವು ಸಾಧಿಸಿತು. ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೋಟನಾಳಿರ ೬ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೧೪ ರನ್ ಗಳಿಸಿತು. ಚೌರೀರ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೮೯ ರನ್ ಮಾತ್ರ ಗಳಿಸಿ ಸೋಲು ಕಂಡಿತು.

ಮಚ್ಚಮಾಡ ಮತ್ತು ಸರ್ಕಂಡ ನಡುವಿನ ಪಂದ್ಯದಲ್ಲಿ ಮಚ್ಚಮಾಡ ೫೭ ರನ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಚ್ಚಮಾಡ ೬ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೦೦ ರನ್ ಸೇರಿಸಿತು. ಸರ್ಕಂಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೩ ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಪAದ್ಯAಡ ಮತ್ತು ಪೊನ್ನಚಂಡ ನಡುವಿನ ಪಂದ್ಯದಲ್ಲಿ ಪಂದ್ಯAಡಕ್ಕೆ ೧೦ ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪೊನ್ನಚಂಡ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿತು. ಪಂದ್ಯAಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೩.೫ ಓವರ್‌ಗಳಲ್ಲಿ ೬೫ ರನ್ ಸೇರಿಸಿ ಗೆಲುವು ಕಂಡಿತು.

ಆತಿಥೇಯ ಮುಕ್ಕಾಟಿರ (ಬೇತ್ರಿ) ಮತ್ತು ಮಾದೆಯಂಡ (ಮಾದಾಪುರ) ನಡುವಿನ ಪಂದ್ಯದಲ್ಲಿ ಮಾದೆಯಂಡ ೩೧ ರನ್‌ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾದೆಯಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೭೦ ರನ್ ಸೇರಿಸಿತು. ಮುಕ್ಕಾಟಿರ ೬ ಓವರ್ ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿ ಸೋಲು ಅನುಭವಿಸಿತು.

ಗೀಜಿಗಂಡ ಮತ್ತು ಬೊಳ್ಳೆಪಂಡ ನಡುವಿನ ಪಂದ್ಯದಲ್ಲಿ ಗೀಜಿಗಂಡ ತಂಡಕ್ಕೆ ೩೫ ರನ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗೀಜಿಗಂಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೮ ರನ್ ಗಳಿಸಿತು. ಬೊಳ್ಳೆಪಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೮ ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಮೈದಾನ ೨ ರಲ್ಲಿ ನಡೆದ ಪಂದ್ಯದಲ್ಲಿ ಚೇರಂಡ ಮತ್ತು ಕೋಳೆರ ನಡುವಿನ ಪಂದ್ಯದಲ್ಲಿ ಕೋಳೆರ ತಂಡ ೭ ವಿಕೆಟ್‌ಗಳಿಂದ ಗೆಲುವು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೇರಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೯ ರನ್ ಸೇರಿಸಿತು. ಕೋಳೆರ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಜಯ ಸಾಧಿಸಿತು.

ಮೂಕಳೆರ ಮತ್ತು ಕೂತಂಡ ನಡುವಿನ ಹಣಾಹಣಿಯಲ್ಲಿ ಮೂಕಳೆರ ೨೯ ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೂಕಳೆರ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೬೫ ರನ್ ಗಳಿಸಿತು. ಕೂತಂಡ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೬ ರನ್ ಮಾತ್ರ ಗಳಿಸಿ ಸೋಲು ಕಂಡಿತು.

ಕೋಳುಮಾಡAಡ (ರ‍್ವತ್ತೊಕ್ಲು) ಮತ್ತು ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಚೊಟ್ಟಂಗಡ ತಂಡಕ್ಕೆ ೯ ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಳುಮಾಡಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೭ ರನ್ ಸೇರಿಸಿತು. ಚೊಟ್ಟಂಗಡ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿ ಗೆಲುವು ಸಾಧಿಸಿತು.

ಮುಕ್ಕಾಟಿರ (ಹರಿಹರ ಬೆಳ್ಳೂರು) ಹಾಗೂ ಕಂಗAಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೧೦ ವಿಕೆಟ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಂಗAಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿತು. ಮುಕ್ಕಾಟಿರ ಕೇವಲ ೨.೧ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೨ ರನ್ ಸೇರಿಸಿ ಗೆಲುವು ಕಂಡಿತು.

ಪಾರುವAಡ ಮತ್ತು ಬೊಳ್ಳಚೆಟ್ಟಿರ ನಡುವೆ ಪಂದ್ಯ ನಡೆಯಬೇಕಾಗಿತ್ತಾದರೂ ಬೊಳ್ಳಚೆಟ್ಟೀರ ತಂಡದಲ್ಲಿ ಆಟಗಾರರ ಕೊರತೆ ಉಂಟಾದ ಹಿನ್ನೆಲೆ ವಾಕ್‌ಓವರ್ ಮೂಲಕ ಪಾರುವಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.