ಸೋಮವಾರಪೇಟೆ, ಏ. ೨೨: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಪರಿವಾರ ಶ್ರೀ ವೀರಭದ್ರೇಶ್ವರ ದೇವರ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರುತ್ತಿದ್ದು, ತಾ. ೨೩ರಂದು (ಇಂದು) ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರ, ಶ್ರೀ ವೀರಭದ್ರೇಶ್ವರ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ.

ಬಸವೇಶ್ವರ ದೇವಾಲಯ ಸಮಿತಿ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗರ್ಭಗೃಹದಲ್ಲಿ ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರ, ಶ್ರೀ ವೀರಭದ್ರೇಶ್ವರ, ದೇವರ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವಕ್ಕೆ ತಾ. ೨೧ರಂದು ಚಾಲನೆ ದೊರೆತಿದ್ದು, ತಾ. ೨೪ರವರೆಗೆ ವಿವಿಧ ಪೂಜಾಕೈಂಕರ್ಯಗಳು ನಡೆಯಲಿವೆ.

ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ, ಸ್ವಸ್ತಿ ಪಂಚಗವ್ಯ ಪುಣ್ಯಾಹ, ಭೂ ಶುದ್ಧಿ ಹೋಮ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತು ಪೂಜೆ, ವಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ ಪೂಜೆ, ಸ್ವಸ್ತಿ ಪುಣ್ಯಾಹ, ಗಣಯಾಗ, ನವಗ್ರಹ ಹೋಮ, ಅನುಜ್ಞಾ ಕಳಸ, ಜೀರ್ಣಬಿಂಬೋದ್ವಾಸನೆ, ಬಿಂಬ ಶುದ್ಧಿ ಶಯ್ಯಾಧಿವಾಸ, ಧ್ಯಾನಾಧಿವಾಸ, ಶಾಂತಿ ಪ್ರಾಯಶ್ಚಿತ ಹೋಮ, ಶಿರಸ್ತತ್ವ ಹೋಮ, ಅಧಿವಾಸ ಹೋಮ, ಶಕ್ತಿ ಹೋಮ, ಪೀಠ ಪ್ರಾಸಾದಾಧಿ ವಾಸ ಪೂಜೆಗಳಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಭಾಗವಹಿಸಿದ್ದರು.

ತಾ. ೨೩ರಂದು(ಇAದು) ಬೆಳಿಗ್ಗೆ ೬ ಗಂಟೆಯಿAದ ಸ್ವಸ್ತಿ ವಾಚನ, ಗಣಯಾಗ, ೮ ಗಂಟೆಗೆ ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರ, ಶ್ರೀ ವೀರಭದ್ರೇಶ್ವರ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಅಷ್ಟಬಂಧ ಪ್ರಕ್ರಿಯೆ, ಜೀವತತ್ವ ಕಲಶಾಭಿಷೇಕಗಳು, ನ್ಯಾಸಾಧಿಗಳು, ಶ್ರೀ ರುದ್ರಹೋಮ, ಬ್ರಹ್ಮ ಕಲಶ ಮಂಡಲ ರಚನೆ, ಸಂಜೆ ೪ ಗಂಟೆಯಿAದ ಪಂಚವಿAಶತಿ ಮತ್ತು ನಮೋತ್ತರಶತ ಕಲಶಾಧಿವಾಸ, ಅಧಿವಾಸ ಹೋಮಗಳು ನಡೆಯಲಿವೆ. ತಾ. ೨೪ರಂದು ಬೆಳಿಗ್ಗೆ ೬ ಗಂಟೆಯಿAದ ಗಣಯಾಗ ಕಲಶಾಭಿಷೇಕ, ೮.೨೬ಕ್ಕೆ ಬ್ರಹ್ಮ ಕಲಶಾಭಿಷೇಕ, ನ್ಯಾಸಾಧಿಗಳು, ಪ್ರಸನ್ನ ಪೂಜೆ, ದೇವರ ಉತ್ಸವ, ದರ್ಶನ ಬಲಿ, ಮಹಾಪೂಜೆ, ಸ್ವಸ್ತಿ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.