ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಏ. ೨೨: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಏಳು ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಎಲ್ಲ ಅಪರಾಧಿಗಳಿಗೂ ತಲಾ ೭ ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಎನ್ಐಎ ಪರವಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಮಂಗಳವಾರ ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ೭ ವರ್ಷ ಜೈಲು ಶಿಕ್ಷೆ ಜೊತೆಗೆ ೪೮ ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಈ ಎಲ್ಲಾ ಅಪರಾಧಿಗಳಲ್ಲಿ ಮೂವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿದ್ದಾಗ ಸ್ಟೇಡಿಯಂ ಸ್ಪೋಟದ ಮಾಸ್ಟರ್ಮೈಂಡ್ ತಡಿಯಂಟವಿಡೆ ನಸೀರ್ನ ಪರಿಚಯವಾಗಿತ್ತು. ನಸೀರ್ ಕೊಡಗಿನ ಹೊಸತೋಟದಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಆಶ್ರಯ ಪಡೆದು ೨೦೦೮ ರಲ್ಲಿ ಸ್ಟೇಡಿಯಂ ಸ್ಪೋಟದ ಸಂಚು ರೂಪಿಸಿದ್ದ. ನಂತರ ಇವನನ್ನು ಬಾಂಗ್ಲಾ ಗಡಿಯಲ್ಲಿ ೨೦೧೦ ರಲ್ಲಿ ಬಂಧಿಸಲಾಗಿತ್ತು.
ಆರೋಪಿಗಳೆಲ್ಲರೂ ಸೇರಿ ನಸೀರ್ನನ್ನು ಜೈಲಿನಿಂದ ಹೊರಗೆ ಕೋರ್ಟಿಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸ್ ವಾಹನದ ಮೇಲೆ ಗ್ರೆನೇಡ್ಗಳು ಮತ್ತು ಬಾಂಬ್ ಎಸೆದು ಅವನನ್ನು ಪೊಲೀಸ್ ಬಂಧನದಿAದ ಬಿಡಿಸಿ ಕರೆದೊಯ್ಯಲು ಸಂಚು ರೂಪಿಸಿದ್ದರು. ಅದಕ್ಕಾಗಿ ಸ್ಪೋಟಕಗಳು , ಬಾಂಬ್ ಮತ್ತು ವಾಕಿ ಟಾಕಿಗಳನ್ನೂ ಸಂಗ್ರಹಿಸಿ ಇಟ್ಟಿದ್ದರು. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ ಏಎಸ್ಐ ಕೂಡ ಶಾಮೀಲಾಗಿದ್ದ. ೨೦೨೩ರಲ್ಲಿ ಬೇರೊಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳ ದೂರವಾಣಿಗೆ ಕಳ್ಳಗಿವಿ ಇಟ್ಟು ಸಂಭಾಷಣೆ ಆಲಿಸಿದಾಗ ಈ ಸಂಚು ಬೆಳಕಿಗೆ ಬಂದಿತ್ತು. ಕೂಡಲೇ ಆರ್.ಟಿ ನಗರದ ಮನೆಯ ಮೇಲೆ ಧಾಳಿ ನಡೆಸಿದ ಪೊಲೀಸರು ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳನ್ನು , ನಕಾಶೆ ಸಹಿತ ವಶಪಡಿಸಿಕೊಂಡಿದ್ದರು.
ಆರೋಪಿಗಳ ಬಂಧನ ಬಳಿಕ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡು ವಿಚಾರಣೆ ಮಾಡಿತ್ತು. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರು ಸ್ಫೋಟದ ರೂವಾರಿ ಟಿ. ನಸೀರ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜೊತೆ ಸಂಪರ್ಕ ಹೊಂದಿದ್ದು ಆತನನ್ನು ಬಿಡಿಸುವ ಜತೆಗೇ ಮತ್ತೆಯೂ ಬೆಂಗಳೂರಿನ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸ್ಪೋಟ ನಡೆಸಲು ಭಾರೀ ಸಂಚು ರೂಪಿಸಿದ್ದುದು ಬೆಳಕಿಗೆ ಬಂದಿತ್ತು. ಜೈಲಿನಲ್ಲಿದ್ದರೂ ನಸೀರ್ ಉಗ್ರವಾದವನ್ನು ಹರಡುತಿದ್ದುದೇ ಅಲ್ಲದೆ ಇತರ ಕೈದಿಗಳ ಮತಾಂತರಕ್ಕೂ ಪ್ರಯತ್ನಿಸಿದ್ದು ಈತನ ಮೇಲೆ ಪ್ರಕರಣ ದಾಖಲಾಗಿದೆ.
ಈ ಸಂಚಿನ ಪ್ರಮುಖ ಆರೋಪಿ ಜುನೈದ್ ಇನ್ನೂ ತಲೆಮರೆಸಿಕೊಂಡಿದ್ದು ಆತನ ಸುಳಿವಿಗೆ ಎನ್ಐಏ ಐದು ಲಕ್ಷ ಬಹುಮಾನವನ್ನೂ ಘೋಷಿಸಿದೆ. ಆತ ದುಬೈನಲ್ಲಿ ಅಡಗಿರಬಹುದೆಂದು ಶಂಕಿಸಲಾಗಿದೆ.