ಚೆಯ್ಯಂಡಾಣೆ, ಏ. ೨೧: ಬಿಸಿಲ ಧಗೆಯಿಂದ ನೀರು ಸಿಗದೆ ಬಳಲುತ್ತಿರುವ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜೀವ ಹನಿ ಕಾರ್ಯಕ್ರಮ ಆಯೋಜಿಸಲಾಯಿತು.
ಜಲ ಅವರದ್ದೂ ಕೂಡ; ನಮ್ಮಂತೆ ಅವರೂ ಬದುಕಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾಣಿ ಅಥವಾ ಪಕ್ಷಿಗಳಿಗೆ ಮಡಿಕೆಯಲ್ಲಿ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ರಮದ ಉದ್ಘಾಟನೆ ವೀರಾಜಪೇಟೆ ಅನ್ವಾರುಲ್ ಹುದಾದಲ್ಲಿ ಎಸ್.ಎಸ.ಎಫ್. ಕೊಡಗು ಜಿಲ್ಲಾಧ್ಯಕ್ಷರಾದ ಕಮರುದ್ದೀನ್ ಅನ್ವಾರಿ ಸಖಾಫಿ ನೇತೃತ್ವದಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಲಿಹುದಿಕೇರಿ ಸಂದೇಶ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿಗಳಾದ ಕಮರುದ್ದೀನ್ ಅನ್ವಾರಿ ಅಹ್ಸನಿ, ಬಶೀರ್ ಹೊದವಾಡ, ಜುನೈದ್ ಅನ್ವಾರಿ ಅಹ್ಸನಿ, ಹಸೈನಾರ್ ಹೊಸತೋಟ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
-ಅಶ್ರಫ್