ನಾಪೋಕ್ಲು, ಏ. ೨೦: ಕೊಡವ ಜನಪದ, ಸಂಸ್ಕೃತಿ, ಆಚಾರ, ವಿಚಾರ, ಕಲೆ, ಪದ್ಧತಿ ಪರಂಪರೆಗಳು ಜನಮಾನಸದಿಂದ ಮರೆಯಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಹೇಳಿದರು.

ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕೊಡವ ಆಟ್ ಪಾಟ್ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡವ ಜನಾಂಗದ ಸಂಸ್ಕೃತಿ, ಕಲೆ, ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಕೊಡವ ಸಂಸ್ಕೃತಿ, ಪದ್ಧತಿ, ಪರಂಪರೆಗಳು ಕೇವಲ ಮಾತಿನಲ್ಲಿ ಉಳಿದಿವೆ. ಯುವ ಪೀಳಿಗೆ ಸಂಸ್ಕೃತಿ ಸಂಪ್ರದಾಯಗಳ ಆಚರಣೆಯಿಂದ ದೂರ ಉಳಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಸಂಸ್ಕೃತಿ, ಕಲೆ, ಸಂಪ್ರದಾಯಗಳನ್ನು ತಲುಪಿಸುವ ಉದ್ದೇಶದಿಂದ ಆಟ್ ಪಾಟ್ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದರು. ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ಬಾಳೆಯಡ ನಿಶಾ ಮೇದಪ್ಪ, ಪದಾಧಿಕಾರಿಗಳು, ಸದಸ್ಯರು, ತರಬೇತುದಾರರಾದ ಚೀಯಕಪೂವಂಡ ದೇವಿ ದೇವಯ್ಯ, ಚೇನಂಡ ಮಧು ಮಾದಯ್ಯ, ಚೇನಂಡ ಗಿರೀಶ್ ಪೂಣಚ್ಚ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಸೇರಿದಂತೆ ಪೋಷಕರು, ಸಮಾಜದÀವರು ಉಪಸ್ಥಿತರಿದ್ದರು. ಕೊಡವ ಆಟ್ ಪಾಟ್ ಶಿಬಿರವು ಒಂದು ತಿಂಗಳ ಕಾಲ ನಡೆಯಲಿದೆ.