ಮಡಿಕೇರಿ, ಏ. ೧೯: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಕೂತಂಡ, ಮಾಚೆಟ್ಟಿರ ಸೇರಿದಂತೆ ಹಲವು ತಂಡಗಳು ಮುನ್ನಡೆ ಸಾಧಿಸಿದವು.
ಮೂರ್ನಾಡಿನ ಲಾಲು ಮುದ್ದಯ್ಯ ಮೈದಾನದಲ್ಲಿ ಕೂತಂಡ ಮತ್ತು ಅಪ್ಪುಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡಕ್ಕೆ ೭ ವಿಕೆಟ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪುಮಣಿಯಂಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೬ ರನ್ ಗಳಿಸಿತು. ಕೂತಂಡ ೫ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೯ ರನ್ ಪೇರಿಸಿ ಗೆಲುವು ದಾಖಲಿಸಿತು.
ಕಂಗಾAಡ ಮತ್ತು ಮಾದೆಯಂಡ (ಎಂ.ಬಾಡಗ) ನಡುವಿನ ಪಂದ್ಯದಲ್ಲಿ ಕಂಗಾAಡ ೧೦ ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾದೆಯಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೩ ರನ್ ದಾಖಲಿಸಿತು. ಕಂಗಾAಡ ೪.೪ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೮ ರನ್ ಗಳಿಸಿ ಜಯ ಸಾಧಿಸಿತು.
ಮೂಕೊಂಡ ಮತ್ತು ಅಯ್ಯಲಾಪಂಡ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡಕ್ಕೆ ೮ ವಿಕೆಟ್ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಯ್ಯಲಾಪಂಡ ೬ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೫೮ ರನ್ ಸೇರಿಸಿತು. ಮೂಕೊಂಡ ೪.೩ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿ ಗೆಲುವು ಕಂಡಿತು.
ಮುಕ್ಕಾಟಿರ (ಬೆಳ್ಳೂರು-ಹರಿಹರ) ಹಾಗೂ ಮುಂಡಚಾಡಿರ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಮುಂಡಚಾಡಿರ ನಿಗದಿತ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೨ ರನ್ ಬಾರಿಸಿತು. ಗುರಿ ಬೆನ್ನತ್ತಿದ ಮುಕ್ಕಾಟಿರ ೨.೪ ಓವರ್ನಲ್ಲಿಯೇ ೪೪ ರನ್ ಪೇರಿಸಿ ಗೆಲುವು ಕಂಡಿತು.
ಮಲ್ಲಜ್ಜೀರ ಮತ್ತು ಚಾರಿಮಂಡ ನಡುವಿನ ಪಂದ್ಯದಲ್ಲಿ ಮಲ್ಲಜ್ಜೀರ ೧೦ ವಿಕೆಟ್ಗಳ ಜಯ ದಾಖಲಿಸಿತು. ಚಾರಿಮಂಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೯ ರನ್ ಗಳನ್ನು ಗಳಿಸಿತು. ಮಲ್ಲಜ್ಜೀರ ೪.೩ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೫ ರನ್ ಸೇರಿಸಿ ಗೆಲುವು ಕಂಡಿತು.
ಪೆಬ್ಬಟ್ಟಿರ ಮತ್ತು ಅಪ್ಪುಡ ನಡುವಿನ ಪಂದ್ಯದಲ್ಲಿ ಪೆಬ್ಬಟ್ಟಿರ ೪ ರನ್ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪೆಬ್ಬಟ್ಟಿರ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೭೧ ರನ್ ಸೇರಿಸಿತು. ಅಪ್ಪುಡ ೬ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೭ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅರಮೇರಿಯ ಎಸ್ಎಂಎಸ್ ಮೈದಾನದಲ್ಲಿ ಬೋವ್ವೇರಿಯಂಡ ಮತ್ತು ಮುಕ್ಕಾಟಿರ (ಕುಂಜಲಗೇರಿ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೧೧ ರನ್ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ೬ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೩ ರನ್ ಸೇರಿಸಿತು. ಬೋವ್ವೇರಿಯಂಡ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಸೋಲು ಕಂಡಿತು.
ಮಾದೇಟಿರ ಮತ್ತು ಬೊಳ್ಳಚೆಟ್ಟಿರ ನಡುವಿನ ಪಂದ್ಯದಲ್ಲಿ ಬೊಳ್ಳಚೆಟ್ಟಿರ ತಂಡಕ್ಕೆ ೯೦ ರನ್ಗಳ ಭರ್ಜರಿ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೊಳ್ಳಚೆಟ್ಟಿರ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಅಮೋಘ ೧೩೬ ರನ್ಗಳನ್ನು ಗಳಿಸಿತು. ಮಾದೇಟಿರ ೬ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೭ ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.
ಅರಮಣಮಾಡ (ಬೇಗೂರು) ಮತ್ತು ಕರವಂಡ ನಡುವಿನ ಪಂದ್ಯದಲ್ಲಿ ಕರವಂಡ ತಂಡ ೮ ವಿಕೆಟ್ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅರಮಣಮಾಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೩ ರನ್ಗಳನ್ನು ಗಳಿಸಿತು. ಕರವಂಡ ೪.೫ ಓವರ್ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೪ ರನ್ಗಳನ್ನು ಪೇರಿಸಿ ಗೆಲುವಿನ ನಗು ಬೀರಿತು.
ಕೊಟ್ಟಂಗಡ ಮತ್ತು ತೀತಿರ (ಹುದಿಕೇರಿ) ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡಕ್ಕೆ ೪೨ ರನ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೮ ರನ್ ಸೇರಿಸಿತು. ತೀತಿರ ೬ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿ ಸೋಲು ಕಂಡಿತು.
ಮುಂಡ್ಯೋಳAಡ ಮತ್ತು ಮಾಚೆಟ್ಟಿರ (ಬಾಳುಗೋಡು) ನಡುವಿನ ಹಣಾಹಣಿಯಲ್ಲಿ ಮಾಚೆಟ್ಟಿರ ೯ ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡ್ಯೋಳAಡ ೬ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಮಾಚೆಟ್ಟಿರ ೨.೩ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೧ ರನ್ಗಳನ್ನು ಸೇರಿಸಿ ಜಯ ಸಾಧಿಸಿತು. ಸಣ್ಣುವಂಡ ಮತ್ತು ಬಡುಮಂಡ ನಡುವಿನ ಪಂದ್ಯದಲ್ಲಿ ಸಣ್ಣುವಂಡಕ್ಕೆ ೧೦ ವಿಕೆಟ್ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಡುಮಂಡ ೬ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೩ ರನ್ ಸೇರಿಸಿತು. ಸಣ್ಣುವಂಡ ೨.೧ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೬ ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.