ಸೋಮವಾರಪೇಟೆ, ಏ. ೧೯: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೇತೃತ್ವದಲ್ಲಿ ರಾಷ್ಟçವ್ಯಾಪಿ ನಡೆಯುತ್ತಿರುವ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮದ ಅಂಗವಾಗಿ ತಾ.೨೧ ರಂದು ಶ್ರೀ ಸೋಮನಾಥ ಜ್ಯೋತಿರ್ಲಿಂಗವು ಸೋಮವಾರಪೇಟೆಗೆ ಆಗಮಿಸಲಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.

ಗುಜರಾತ್‌ನ ಸೋಮನಾಥ ದೇವಸ್ಥಾನದ ಮೇಲೆ ಮಹಮ್ಮದ್ ಘಜ್ನಿ ಧಾಳಿ ಮಾಡಿದ ಸಂದರ್ಭ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಬ್ರಾಹ್ಮಣರು ಸಂರಕ್ಷಿಸಿ, ಚೂರುಗಳಿಗೆ ಶಿವಲಿಂಗದ ರೂಪವನ್ನು ಕೊಟ್ಟು ನೂರಾರು ವರ್ಷಗಳ ಕಾಲ ಸಂರಕ್ಷಿಸಿಕೊAಡು ಬಂದಿರುವ ಜ್ಯೋತಿರ್ಲಿಂಗವನ್ನು, ಇದೀಗ ಶ್ರೀ ರವಿಶಂಕರ್ ಗುರೂಜಿಯವರ ಆಶ್ರಮದ ವತಿಯಿಂದ ಜನರಿಗೆ ದರ್ಶನ ಮಾಡಿಸುವ ಕಾರ್ಯಕ್ರಮ ನಡೆಯುತ್ತಿದೆ.

ಈ ಪ್ರಯುಕ್ತ ತಾ.೨೧ ರಂದು ಸಂಜೆ ೫ ಗಂಟೆಯಿAದ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗ ದರ್ಶನ, ಸತ್ಸಂಗ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ರಾಗಿಣಿ ಅವರು ಮಾಹಿತಿ ನೀಡಿದ್ದಾರೆ.